ಇ.ವಿ.ಎಂ ಆ್ಯಪ್ ಬಳಸಿ ಚುನಾವಣಾ ಪ್ರಕ್ರೀಯೆ ಬಗ್ಗೆ ಜಾಗೃತಿ ಮೂಡಿಸಿದ ಶಿಕ್ಷಕರು

ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ವಿವೇಕ ವಿದ್ಯಾ ಸಂಸ್ಥೆ, ಕೋಟ ವಲಯದ ಏಕೈಕ ಬಾಲಕಿಯರ ಪ್ರೌಢಶಾಲೆಯಾಗಿದ್ದು , ಸದಾ ಹೊಸತನದ ಪ್ರಯೋಗಶೀಲತೆಯ ನಡುವೆ ತನ್ನದೆ ಆದ ಪ್ರಸಿದ್ಧ ಪಡೆದ ಸಂಸ್ಥೆ ಆದರೆ ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಇ.ವಿ.ಎಂ ಆ್ಯಪ್ ಬಳಸಿ ಶಾಲಾ ಸಂಸತ್ತಿನ ಚುನಾವಣೆ ನಡೆಸಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರೀಯೆ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ವಿದ್ಯಾರ್ಥಿ ಸಂಸತ್ತು ರಚಿಸುವುದ ಜೊತೆಗೆ ನ್ಯಾಯಯುತ ಚುನಾವಣೆಯ ಬಗ್ಗೆ ಮಹತ್ವ ಸಾರಿತು.
ಈ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ, ಇ.ವಿ.ಎಂ. ಬಳಸುವ ವಿಧಾನ ತಿಳಿದು ವಿದ್ಯಾರ್ಥಿಗಳು ಸಂತೋಷದಿಂದ ಬ್ಯಾಲೆಟ್ ಯುನಿಟ್‍ನಲ್ಲಿ ಮತ ಚಲಾಯಿಸಿದರು. ತಮ್ಮ ಅಭ್ಯರ್ಥಿಯ ಮುಂದೆ ಬ್ಯಾಲೆಟ್ ಒತ್ತಿದಾಗ ಬೀಪ್ ಸೌಂಡ್ ಹಾಗೂ ತಮ್ಮ ಅಭ್ಯರ್ಥಿಯ ಹೆಸರು, ಪೋಟೋ ಕಾಣಿಸಿದಾಗ ತಮ್ಮ ಅಭ್ಯರ್ಥಿಗೆ ಮತ ಬಿದ್ದಿರುವುದನ್ನು ಖಾತರಿಪಡಿಸಿಕೊಂಡರು.
ಈ ವಿನೂತನವಾದ ಪ್ರಯೋಗದ ಮೂಲಕ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯ ಅನುಭವ ಪಡೆದರು. ವಿದ್ಯಾರ್ಥಿ ನಾಯಕಿಯ ಸ್ಥಾನಕ್ಕೆ ಎರಡು ವಿದ್ಯಾರ್ಥಿಗಳು, ಉಪನಾಯಕಿಯ ಸ್ಥಾನಕ್ಕೆ ಮೂರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾನಾಯಕಿಯಾಗಿ ಅನ್ವಿತ ,ಉಪನಾಯಕಿಯಾಗಿ ಪ್ರತೀಕ್ಷಾ ಆಯ್ಕೆಯಾದರು.
ಮುಖ್ಯಶಿಕ್ಷಕ ಜಗದೀಶ ಹೊಳ್ಳ ಮಾರ್ಗದರ್ಶನ ನೀಡಿದರು. ಸಮಾಜ ವಿಜ್ಞಾನ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಇವರು ಸಂಘಟಿಸಿದರು. ಸಹಶಿಕ್ಷಕರಾದ ರಾಧಾಕೃಷ್ಣ ಭಟ್, ಗಣೇಶ್ ಶೆಟ್ಟಿಗಾರ್, ನಾರಾಯಣಮೂರ್ತಿ, ಸುಮಂಗಲ, ಪುಷ್ಪಲತಾ, ಮಮತ, ವಿಜಯಲಕ್ಷ್ಮಿ, ಮಹಾಲಕ್ಷ್ಮಿ, ನಾಗರತ್ನ ಕುಸುಮಾ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.











