ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕುಂದಾಪುರದ ವಿದ್ಯಾರ್ಥಿ ಪ್ರಖ್ಯಾತ್ ಶೆಟ್ಟಿ 720ರಲ್ಲಿ 600 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾನೆ.
ಕುಂದಾಪುರ ತಾಲ್ಲೂಕಿನ ಕಾವ್ರಾಡಿ ಗ್ರಾಮದ ವಾಸಾಂಥಿಕಾ ಮುಂಬಾರು ನಿವಾಸಿಗಳಾದ ಪ್ರತಿಮಾ ಶೆಟ್ಟಿ ಹಾಗೂ ಹೆಚ್. ಪ್ರಭಾಕರ್ ಶೆಟ್ಟಿಯವರ ಪುತ್ರನಾಗಿರುವ ಪ್ರಖ್ಯಾತ್ ಶೆಟ್ಟಿ ಕಾರ್ಕಳದ ಕುಕ್ಕುಂದೂರಿನ ಕ್ರಿಯೇಟಿವ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.
ಪ್ರಖ್ಯಾತ್ ಶೆಟ್ಟಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಶುಭಾಶಯ ಸಲ್ಲಿಸಿದೆ.











