ಕುಂದಾಪುರ ಮಿರರ್ ಸುದ್ದಿ…
ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗುರುವಾರ ಕೋಟ ಎ.ಪಿ ಎಂ ಸಿ ಸಂತೆ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದರು.
ಕೋಟದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡು ಸಾರ್ವಜನಿಕರ ಸೇವೆ ಅಣಿಯಾದ ಈ ಮಾರುಕಟ್ಟೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಸುಮಾರು ೫೫ಲಕ್ಷ ರೂ ವೆಚ್ಚದಲ್ಲಿ ಕೃಷಿಕರಿಗೆ ಅನುಕೂಲಕ್ಜಾಗಿ ಮೂರು ಗೋದಾಮು ನಿರ್ಮಿಸಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೊಳ್ಳಲಿದೆ. ಅಲ್ಲದೆ ಮಾರುಕಟ್ಟೆ ಇನ್ನಷ್ಟು ಅಭಿವೃದ್ಧಿಗೊಳಿಸುವ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿ ವರ್ಗ ಶಾಸಕರಲ್ಲಿ ಚರ್ಚಿಸಿದರು.
ಈ ವೇಳೆ ಶಾಸಕರು ನೂತನ ಗೋದಾಮು ಅನ್ನು ಎ.ಪಿ.ಎಂ.ಸಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದರು. ಎ.ಪಿ ಎಂ ಸಿ ಕಾರ್ಯದರ್ಶಿ ಗಾಯಿತ್ರಿ.ಎಂ,ಆಡಳಿತಧಿಕಾರಿ ಗೋಪಾಲ ತಿಪ್ಪಣ್ಣ ಕಾಕನೂರ್, ಲೆಕ್ಕಧೀಕ್ಷಕ ರಾಜೀವ್ ಆರ್ ನಾಯ್ಕ್ ಎ.ಪಿ.ಎಂ ಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ,ಗುತ್ತಿಗೆದಾರ ರಜತ್ ಹೆಗ್ಡೆ,ನಾಗರಾಜ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.











