ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 7 ಅಂಕಗಳನ್ನು ಪಡೆದ ರಶ್ಮಿ 621 ಅಂಕಗಳನ್ನು ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾಳೆ. ಈಕೆ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ತ್ರಾಸಿ ನಿವಾಸಿ ಗುಂಡ್ಮಿ ರಾಘವೇಂದ್ರ ಭಟ್ ಮತ್ತು ಸುಮಂಗಲ ದಂಪತಿಯ ಪುತ್ರಿ.











