ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಜ್ಯದ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಸೋಮವಾರ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ ವ್ಯಾಪ್ತಿಯ ಕೋಡಿ ಹೊಸಬೇಂಗ್ರೆ ಲೈಟ್ ಹೌಸ್ ಸೇರಿದಂತೆ ವಿವಿಧ ಭಾಗಗಳು,ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಪಡುಕರೆ ಕಡಲ್ಕೊರೆತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಹಿಂದೆ ಸರಕಾರದ ಅವಧಿಯಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಕರಾವಳಿಯ ಹೆಚ್ಚಿನ ಕಡಲ್ಕೊರೆತ ಸ್ಥಳಗಳಿಗೆ ಶ್ವಾಶತ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಕೆಲವೊಂದು ಭಾಗಗಳು ಕಡಲ್ಕೊರೆತಕ್ಕೆ ತುತ್ತಾಗಾತ್ತಿವೆ, ಈ ಹಿನ್ನಲೆಯಲ್ಲಿ ಪ್ರಸ್ತುತ ಸರಕಾರದ ಗಮನ ಸೆಳೆಯಲಾಗುವುದಲ್ಲದೆ ಬಂದರೂ ಮೀನುಗಾರಿಕಾ ಸಚಿವರೊಂದಿಗೆ ಚರ್ಚಿಸಿ ಶ್ವಾಶತ ತಡೆಗೋಡೆ ನಿರ್ಮಿಸುವುದರ ಕುರಿತು ಚರ್ಚಿಸುತ್ತೇನೆ, ಇದಕ್ಕಾಗಿ ಮಂಗಳವಾರ ಉಡುಪಿಯಲ್ಲಿ ಸಂಬಂಧಿಸಿದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಯಾ ಭಾಗದ ಕಡಲ್ಕೊರೆತ ಸ್ಥಳಗಳಿಗೆ ಶಾಶ್ವತ ಪರಿಹಾರ ಕ್ರಮಕ್ಕೆ ರೂಪರೇಷ ಸಿದ್ಧಪಡಿಸಲಿದ್ದೇವೆ ಎಂದರು.
ಈ ವೇಳೆ ಮೀನುಗಾರಿಕಾ ಮುಖಂಡರಾದ ಲಕ್ಷ್ಮಣ್ ಸುವರ್ಣ, ಚಂದ್ರ ಕಾಂಚನ್, ಅಣ್ಣಪ್ಪ ಕುಂದರ್ , ಪ್ರಭಾಕರ ಬಂಗೇರ, ಕೃಷ್ಣಪ್ಪ ಬಂಗೇರ, ಅಶೋಕ್ ತಿಂಗಳಾಯ, ಉದಯ್ ಕಾಂಚನ್, ಪ್ರತಾಪ್ ಪೂಜಾರಿ, ಕರಾವಳಿ ಕಾವಲು ಪಡೆಯ ಮಹೇಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.











