ಕೋಟತಟ್ಟು – ಕಲ್ಮಾಡಿ ಅಂಗನವಾಡಿಯಲ್ಲಿ ಪುಟಾಣಿಗಳ ಉತ್ಸವ

0
363

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಕೋಟ: ಇಲ್ಲಿನ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.

ಕೋಟದ ಅಮೃತೇಶ್ವರಿ ದೇವಸ್ಥಾನದ ಟ್ರಸ್ಟಿ ಸುಬ್ರಾಯ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ ವಾತಾವರಣ ಸಿಗುತ್ತಿದೆ ಇಲ್ಲಿ ಕಾರ್ಯಕರ್ತೆಯ ಕ್ರೀಯಾಶೀಲತೆ ಅಷ್ಟೆ ಪ್ರಮುಖವಾಗಿದೆ ಈ ದಿಸೆಯಲ್ಲಿ ಇಲ್ಲಿನ ಕಾರ್ಯವೈಕರಿಯನ್ನು ಶ್ಲಾಘಿಸಿದ ಶ್ರೀಯುತರು, ಕಲ್ಮಾಡಿ ಅಂಗನವಾಡಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪುಟಾಣಿಗಳಿಗೆ ನೈಜತೆ ಅಂಗನವಾಡಿಯಿಂದ ಪ್ರಾರಂಭಗೊಳ್ಳುತ್ತದೆ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಕರೆನೀಡಿದರು.

Click Here

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ಯೋಜನೆಗಳ ಬಗ್ಗೆ ಪರಿಚಯಿಸಿದರು. ಪ್ರಸ್ತುತ ಗ್ರಹಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಪುಟಾಣಿಗಳಿಗೆ ಭವ್ಯ ಸ್ವಾಗತ
ಕಾರಂತ ಥೀಂ ಪಾರ್ಕ್‍ನಲ್ಲಿರುವ ಕಲ್ಮಾಡಿ ಅಂಗನವಾಡಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳಿಂದ ಪ್ರಸಿದ್ಧಿ ಪಡೆದಿದೆ ಅದರಂತೆ ಅಂಗನವಾಡಿ ಉತ್ಸವದ ಹಿನ್ನಲ್ಲೆಯಲ್ಲಿ ಪುಟಾಣಿಗಳನ್ನು ಪುಷ್ಭ ಸಿಂಚನದ ಮೂಲಕ ಸ್ವಾಗತಿಸಿ, ಸಿಹಿ ಹಂಚಿ ಬರಮಾಡಿಕೊಳ್ಳಲಾಯಿತು. ಅಲ್ಲದೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳಾದ ರಾಘವೇಂದ್ರ ಪ್ರಭು ಕೋಟ, ಎ.ಕೆ ಐತಾಳ್ ಸಾಲಿಗ್ರಾಮ, ಭಾಸ್ಕರ ದೇವಾಡಿಗ, ಅಂಗನವಾಡಿ ಹೊಸ ರೂಪಕ್ಕೆ ಹೊಸ ಬಾಷ್ಯ ಬರೆದ ಗಿರೀಶ್ ವಕ್ವಾಡಿ, ಮೊದಲಾದವರಿಗೆ ಸ್ಮರಿಸಿ ಶಾಲು ಹೊದಿಸಿ ಪುಟಾಣಿಗಳಿಂದ ಹೂಗುಚ್ಛ ಅಭಿನಂದಿಸಲಾಯಿತು. ಪಂಚಾಯತ್ ಸದಸ್ಯರಾದ ಸರಸ್ವತಿ, ಬಾಲ ವಿಕಾಸ ಸಮಿತಿ ಅಧ್ಯಕ್ಷ ವನಜ, ರಾಘವೇಂದ್ರ ಪ್ರಭು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪೋಷಕರು, ಬಾಲವಿಕಸ ಸಮಿತಿ ಸದಸ್ಯರು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಟೀಚರ್ ಜಯಲಕ್ಷ್ಮೀ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here