ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಮಣೂರು ಶ್ರೀ ಹೇರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ ಬೆಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ಕಾರ್ಯಕ್ರಮ ಸಕಲ ಧಾರ್ಮಿಕ ಕಾರ್ಯದ ನಡುವೆ ನೆರವೆರಿತು.
ಪೂರ್ವಾಹ್ನ 8.ಗ ಆರಂಭಗೊಂಡ ಅಭಿಷೇಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತ್ರತ್ವದಲ್ಲಿ ಆರಂಭಗೊಂಡ ಸೀಯಾಳ ಅಭಿಷೇಕ 11ಗ.ವೆರೆಗೆ ನಡೆಯಿತು.
ಭಕ್ತ ಸಮುದಾಯ ಶ್ರೀದೇವರಿಗೆ ಅರ್ಪಿಸಿದ ಸೀಯಾಳ ಅರ್ಚಕರು ಒಂದೊಂದಾಗಿ ಶ್ರೀ ದೇವರಿಗೆ ಅಭಿಷೇಕದ ಮೂಲಕ ಸಮರ್ಪಿಸಿದರು. ದೇವಳದ ಅರ್ಚಕರಾದ ರವಿ ಐತಾಳ್ ತಮ್ಮ ತಂಡದವರೊಂದಿಗೆ ಈ ಕೈಂಕರ್ಯದಲ್ಲಿ ಭಾಗಿಯಾದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.











