ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮನೆಯಿಂದ ಶಾಲೆಗೆ ಹೋಗುವ ಸಂದರ್ಭ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಹತ್ತನೇ ತರಗತಿ ವಿದ್ಯಾರ್ಥಿನಿ ಧನ್ವಿ ಮರವಂತೆ ಮಾನವೀಯತೆ ಮೆರೆದಿದ್ದಾಳೆ.
ಕಳೆದ ಶುಕ್ರವಾರ ಬೆಳಿಗ್ಗೆ 8-30ಕ್ಕೆ ಧನ್ವಿ ಪೂಜಾರಿ ಮರವಂತೆ ಮನೆಯಿಂದ ಮೊವಾಡಿಯ ಡಾನ್ ಬೋಸ್ಕೊ ಶಾಲೆಗೆ ಹೋಗುತ್ತಿದ್ದಳು. ವಿರಾಮ ಸಮಯಕ್ಕೆ ಬೇಕಾಗುವ ತಿಂಡಿಯನ್ನು ತರಲು ತ್ರಾಸಿಯ ಸೂಪರ್ ಮಾರ್ಕೆಟ್ ಬಳಿ ಹೋಗುತ್ತಿರುವಾಗ, 500 ರೂಪಾಯಿಗಳ ಒಂದು ಕಟ್ಟು ಬಿದ್ದಿರುವುದು ಕಣ್ಣಿಹೆ ಬಿದ್ದಿತ್ತು. ತಕ್ಷಣ ಅದನ್ನು ತೆಗೆದುಕೊಂಡು ಅಂಗಡಿ ಮಾಲೀಕರಿಗೆ ನೀಡಿ ಶಾಲೆಗೆ ಹೋಗಿದ್ದಾಳೆ. ಬಳಿಕ ಸಂಜೆ ಮನೆಗೆ ಬಂದು ತಾಯಿಯ ಬಳಿ ವಿಷಯ ತಿಳಿಸಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಸೂಪರ್ ಮಾರ್ಕೆಟ್ ಮಾಲೀಕನ ಬಳಿಯಿದ್ದ ಹಣವನ್ನು ಠಾಣೆಗೆ ತಲುಪಿಸಿದ್ದಾರೆ.
ಮಾನವೀಯತೆ ಮೆರೆದ ಧನ್ವಿಗೆ ಠಾಣಾಧಿಕಾರಿ ವಿನಯ್ ಕೊರ್ಲಳ್ಳಿ ಯವರು ಆಕೆಯ ಶಾಲಾ ವಿದ್ಯಾಭ್ಯಾಸಕ್ಕಾಗಿ ತಮ್ಮ ಸ್ವಂತ ಹಣದಿಂದ ಒಂದು ಸ್ಟಡಿ ಸ್ಟೇಬಲ್ ಅನ್ನು ತ್ರಾಸಿ ಅಂಬಾ ಟಿವಿ ಸೆಂಟರ್ ನಲ್ಲಿ ಉಡುಗೊರೆಯಾಗಿ ನೀಡುವ ಮೂಲಕ ಆಕೆಗೆ ಪ್ರೋತ್ಸಾಹ ನೀಡಿದ್ದಾರೆ.











