ಹಕ್ಲಾಡಿ: ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಓಡಿಸುವಂತೆ ಗ್ರಾಮಪಂಚಾಯಿತಿ ಎದುರುಗಡೆ ಧರಣಿ

0
482

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ -ಮುಳ್ಳಿಕಟ್ಟೆ-ಹೊಸಾಡು-ಬಂಟ್ವಾಡಿ-ಕಟ್ಟಿನಮಕ್ಕಿ-ಹಕ್ಲಾಡಿ-ಕುಂದಬಾರಂದಾಡಿ-ನೂಜಾಡಿ-ವಂಡ್ಸೆ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಆಗ್ರಹಿಸಿ ಗುರುವಾರ ಬೆಳಗ್ಗೆ ಹಕ್ಲಾಡಿ ಗ್ರಾಮಪಂಚಾಯಿತಿ ಎದುರುಗಡೆ ಧರಣಿ ನಡೆಸಿದರು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡಿದರೆ ಸೋಮಾರಿಗಳಾಗುತ್ತಾರೆ ಎಂದು ಅವಹೇಳನ ಮಾಡಲಾಗುತ್ತಿದೆ ಸರ್ಕಾರ ಬಡವರಿಗೆ ಸಹಾಯ ಮಾಡಿದರೆ ಸಬ್ಸಿಡಿ ಎಂದು ಬಂಡವಾಳಗಾರರಿಗೆ ಸಹಾಯ ಮಾಡಿದರೆ ಪ್ರೋತ್ಸಾಹ ಧನ ಎಂದು ಕರೆಯಲಾಗುತ್ತಿದೆ. ಎಲ್ಲಿಯವರೆಗೆ ಸಾಮಾನ್ಯ ಜನರಿಗೆ ರಕ್ಷಣೆಯ ಆದಾಯ ಕೊಡುವ ಉದ್ಯೋಗ ಸಿಗುವ ವ್ಯವಸ್ಥೆ ಸರಕಾರ ಮಾಡೋದಿಲ್ಲವೋ ಅಲ್ಲಿಯವರೆಗೆ ಸೌಲಭ್ಯಗಳು ನೀಡಬೇಕು ಶಕ್ತಿ ಯೋಜನೆಯಲ್ಲಿ ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ ಓಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತ ಸಂಘದ ಮುಖಂಡ ಚಂದ್ರಶೇಖರ ಮಾತನಾಡಿ ಉಚಿತ ಶಕ್ತಿ ಯೋಜನೆಯಿಂದ ಕಡಿಮೆ ಆದಾಯವಿರುವ ಕ್ರಷಿಕೂಲಿಕಾರರಿಗೆ,ಕಾರ್ಮಿಕರಿಗೆ,ಬಡ ರೈತರಿಗೆ ಅನುಕೂಲವಾಗಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯಕವಾಗಲಿದೆ ಶೀಘ್ರ ಬಸ್ ಓಡಿಸಲು ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದರು.

Click Here

ಕ್ರಷಿಕೂಲಿಕಾರರ ಸಂಘಟನೆ ಜಿಲ್ಲಾ ಮುಖಂಡರಾದ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್, ಶೀಲಾವತಿ, ನಾಗರತ್ನ ನಾಡ,ಮನೋರಮ ಭಂಡಾರಿ,ಜಯ,ಯಮುನ ಮೊದಲಾದವರಿದ್ದರು.

ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್ ಅವರು ಮನವಿ ಓದಿ ಹೇಳಿದರು

ಪಂಚಾಯತ್ ಅಧ್ಯಕ್ಷರಾದ ಚೇತನ್ ಮೊಗವೀರ ಅವರ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಾರಿಗೆ ನಿಯಂತ್ರಣ ಅಧಿಕಾರಿ ಮಂಗಳೂರು ವಿಭಾಗ ಮಂಗಳೂರು ಅವರಿಗೆ ಮನವಿ ನೀಡಲಾಯಿತು.

Click Here

LEAVE A REPLY

Please enter your comment!
Please enter your name here