ಕೋಟ :ಪಂಚವರ್ಣ ಸಂಸ್ಥೆಯ 170ನೇ ಪರಿಸರಸ್ನೇಹಿ ಅಭಿಯಾನ

0
359

Click Here

Click Here

ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಹೊಸಮನೆಗಳಿಗೆ ಎರಡು ಗಿಡ ನಡಲು ಸೂಚಿಸಬೇಕು –ಕೆ.ವಿ ರಮೇಶ್ ರಾವ್

ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಹೊಸಮನೆಗಳ ಲೈಸೆನ್ಸ್ ನೀಡುವಾಗಲೇ ಎರಡು ಗಿಡ ನೆಡಲು ಸೂಚಿಸಬೇಕು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಸಲಹೆ ನೀಡಿದ್ದಾರೆ.

ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಹಂದಟ್ಟು ಮಹಿಳಾ ಬಳಗ,ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗಿಳಿಯಾರು ಯುವಕ ಮಂಡಲ,ಸಮುದ್ಯತಾ ಗ್ರೂಪ್ಸ್ ,ಗೆಳೆಯರ ಬಳಗ ಕಾರ್ಕಡ ಇದರ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನಕ್ಕೆ 170ನೇ ವಾರದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ವಾತಾವರಣವು ದಿನಕ್ಕೊಂದು ರೂಪ ಪಡೆಯುತ್ತಿದೆ. ಮಳೆಗಾಲವು ಹಿಮ್ಮುಖವಾಗುತ್ತಿದೆ, ತಾಪಮಾನವು ದಿನದಿಂದ ದಿನಕ್ಕ ವಿಕೋಪವನ್ನು ಸೃಷ್ಠಿಸುತ್ತಿದೆ ಇದಕ್ಕೆ ಹೊಣೆಗಾರರು ನಾವುಗಳೇ ಈಗಲೇ ಎಚ್ಚತ್ತುಕೊಳ್ಖದಿದ್ದರೆ ಮುಂದೆ ಆಪತ್ತು ತಪ್ಪಿದಲ್ಲ ಅದಕ್ಕಾಗಿ ಇವತ್ತಿನಿಂದಲೆ ವಾಸ್ತವ್ಯ ಸ್ಥಳದಲ್ಲಿ ಒಂದೆರಡು ಗಿಡಗಳನ್ನ ನೆಟ್ಟು ಪೋಷಿಸುವ ಕಾರ್ಯ ನಡೆಯಲಿ ಎಂದು ಕಿವಿಮಾತ ಹೇಳಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

Click Here

ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಇವರಿಗೆ ಗಿಡ ಹಸ್ತಾಂತರಿಸಲಾಯಿತು.
ಸುತ್ತಮುತ್ತಲಿನ ಪರಿಸರದ ಮನೆಗಳಿಗೆ ತೆರಳಿ ಗಿಡ ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಭಟ್,ಉಪಾಧ್ಯಕ್ಷರು ಜ್ಯೂಡಿತ್ ಪಿಕಾರ್ಡೊ ಮತ್ತು ನಿರ್ದೇಶಕರುಗಳು,ಪಾಂಡೇಶ್ವರ ಗ್ರಾ.ಪಂ ಸದಸ್ಯೆ ಸುಜಾತ ವೆಂಕಟೇಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಪಾಂಡೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಸುಮಿತ್ರ ಸುಧಾಕರ್,ಪಂಚವರ್ಣ ಮಹಿಳಾ ಮಂಡದ ಉಪಾಧ್ಯಕ್ಷ ವಸಂತಿ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ವಂದಿಸಿದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.ಗೀತಾನಂದ ಫೌಂಡೇಶನ್ ಮಣೂರು,ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಗಿಡದ ವ್ಯವಸ್ಥೆ ಕಲ್ಪಿಸಿತು.

Click Here

LEAVE A REPLY

Please enter your comment!
Please enter your name here