ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪೋಷಕರು ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಮತ್ತು ಕಲಿಕೆಯ ಸಾಮರ್ಥ್ಯವನ್ನು ಬೆಂಬಲಿಸಲು ತಂತ್ರಗಳನ್ನು ಅಭಿವೃದ್ಧಿಪಡಿಸಲು ಶಾಲೆಯಲ್ಲಿ ಮಕ್ಕಳ ಅನುಭವದ ಸಮಗ್ರ ನೋಟವನ್ನು ಪಡೆಯುಲು ದೂರುಗಳಿಗಷ್ಟೇ ಸೀಮಿತವಾಗದೇ ಮಗುವಿನ ಸಮಗ್ರ ಕಲಿಕಾ ಪ್ರಕ್ರಿಯೆ ವಿಶ್ಲೇಷಿಸುವ ಹಾಗೂ ಮಗುವಿನ ಮಾನಸಿಕ ಬೆಳವಣಿಗೆ ಕುರಿತು ಚರ್ಚಿಸುವ ವೇದಿಕೆಯಾಗಬೇಕು ಎಂದು ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಸಭೆಯಲ್ಲಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿ ರಿಜಿಸ್ಟರ್ಡ್ ಬೆಂಗಳೂರು ಇವರು ಕೊಡ ಮಾಡಿದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರ ಪಾತ್ರ ವಷ್ಟೇ ಅಲ್ಲ ಕುಟುಂಬ ಹಾಗೂ ಪಾಲಕರದ್ದು ಎಂಬುದನ್ನು ಮರೆಯಬಾರದು ಎಂದರು.
ಸಭೆಯಲ್ಲಿ ವಿವಿಧ ತರಗತಿಯ ಅಧ್ಯಾಪಕರಾದ ಶ್ರೀಕಾಂತ,ರೇಷ್ಮಾ, ಜಯಶ್ರೀ, ಸಂಧ್ಯಾ, ಉಪಸ್ಥಿತರಿದ್ದರು.
ಭಾಷಾ ಹಸನ್ ಸಾಭ್ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿ ಅನುರಾಧ ವಂದಿಸಿದರು.











