ಕುಂದಾಪುರ ಮಿರರ್ ಸುದ್ದಿ…
ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಅಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಕೊಮೆ, ಅಚ್ಲಾಡಿ ಇವರು ಆಯ್ಕೆಯಾದರು. ಇವರು ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಶಿರಿಯಾರ ಇದರ ನಿರ್ದೇಶಕರಾಗಿ, ವಾಸುದೇವ ಮೋಟಾರ್ಸ್ ಇದರ ಮಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಕಾರ್ಯದರ್ಶಿಯಾಗಿ ಮಧುವನ ಯುವಕ ಮಂಡಲದ ಕೋಶಾಧಿಕಾರಿ ಮಹೇಂದ್ರ ಆಚಾರ್ ಮದುವನ ಮತ್ತು ನೂತನ ಕೋಶಾಧಿಕಾರಿಯಾಗಿ ವಸಂತ್.ವಿ.ಶೆಟ್ಟಿ ಸೂರಿಬೆಟ್ಟು, ಅಚ್ಲಾಡಿ ಇವರು ಆಯ್ಕೆಯಾಗಿದ್ದಾರೆ.
ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಪ್ರಥಮ ಉಪಾಧ್ಯಕ್ಷರಾಗಿ ಬಿ.ಬಿ ಪ್ರವೀಣ್ ಹೆಗ್ಡೆ ಉಪ್ಲಾಡಿ-ಬನ್ನಾಡಿ, ಮೆಂಬರ್‍ಶಿಪ್ ಕಮಿಟಿ ಚೇರ್ಮನ್ ರಾಜಾರಾಮ್ ಶೆಟ್ಟಿ ಕಲ್‍ಕಟ್ಟೆ, ಸರ್ವೀಸ್ ಕಮಿಟಿ ಚೇರ್ಮನ್ ಅಜಿತ್ ಶೆಟ್ಟಿ ಕೊತ್ತಾಡಿ, ಎಲ್.ಸಿ.ಐ.ಎಫ್. ಚೇರ್ಮನ್ ಶ್ರೀಧರ್ ಆರ್ ಶೆಟ್ಟಿ ಉಪ್ಲಾಡಿ, ಕ್ಲಬ್ ಅಡ್ಮಿನಿಸ್ಟ್ರೇಟರ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಕ್ಲಬ್ ಮಾರ್ಕೇಟಿಂಗ್ & ಕಮ್ಯುನಿಕೇಶನ್ ಚೈರ್‍ಪರ್ಸನ್ ಬನ್ನಾಡಿ ಶರತ್ ಶೆಟ್ಟಿ, ಟೈಲ್ ಟ್ವಿಸ್ಟರ್ ಸುಧಾಕರ್ ಶೆಟ್ಟಿ ಅಚ್ಲಾಡಿ ಹಾಗೂ ಲಯನ್ ಟ್ಯಾಮರ್ ಸೂರ್ಯಕಾಂತ್ ಶೆಟ್ಟಿ ಬನ್ನಾಡಿ ಆಯ್ಕೆಯಾದರು.
ಬೋರ್ಡ್ ಆಫ್ ಡೈರೆಕ್ಟರ್ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ, ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಯಾಳಕ್ಲು ಚಂದ್ರಶೇಖರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಉಪ್ಲಾಡಿ ಸುಗುಣಾಕರ ಶೆಟ್ಟಿ, ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ, ಬನ್ನಾಡಿ ಪ್ರಭಾಕರ ಶೆಟ್ಟಿ ಮತ್ತು ರಾಜೀವ್ ಶೆಟ್ಟಿ ಅಚ್ಲಾಡಿ ಆಯ್ಕೆಯಾಗಿರುತ್ತಾರೆ ಎಂದು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.











