ಕುಂದಾಪುರ ಮಿರರ್ ಸುದ್ದಿ…
ಕೋಟ: ಐ.ಸಿ.ಎ.ಐ ನಡೆಸಿದ ಈ ಬಾರಿಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶವಾದ ಬೇಳೂರಿನ ನಿವಾಸಿ ಸಚಿನ್ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಸಿ.ಎ ವಿದ್ಯಾಭ್ಯಾಸದ ಪ್ರತಿಯೊಂದು ಹಂತಕ್ಕೂ ಯಾವುದೇ ತರಬೇತಿ ಪಡೆಯದೆ ತನ್ನ ಬಡತನದ ನಡುವೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ . ಕೋಟದ ವಿವೇಕ ಪದವಿ ಪೂರ್ವ ಕಾಲೇಜು ,ಬ್ರಹ್ಮಾವರ ಬಿ. ಡಿ ಶೆಟ್ಟಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಇವರು ಬೇಳೂರಿನ ಉಷಾ ಉದಯ ಕುಮಾರ ಶೆಟ್ಟಿಯವರ ಪುತ್ರ.











