ಕುಂದಾಪುರ ಮಿರರ್ ಸುದ್ದಿ…
ಕೋಟ: ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಸನತ್ ಆರ್. ಶೆಟ್ಟಿ, ತೇರ್ಗಡೆಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಕೋಟ ಮೂಡುಗಿಳಿಯಾರು ಬಡಾಮನೆ ರತ್ನಾಕರ ಜಿ. ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಸತನ್ ಶೆಟ್ಟಿಯವರ ಇಬ್ಬರು ಹಿರಿಯ ಸಹೋದರರು ವೈದ್ಯರಾಗಿದ್ದು, ಕೊರೊನಾ ಸಂದರ್ಭ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರಿಂದ ಪ್ರಶಂಸಗೆ ಪಾತ್ರರಾಗಿದ್ದಾರೆ. ರತ್ನಾಕರ ಜಿ. ಶೆಟ್ಟಿಯವರು ಬಂಟರ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿಯಲ್ಲೂ, ಮಾತೃಭೂಮಿ ಕೋ ಆಪ್ ಕ್ರೆಡಿಟ್ ಸೊಸೈಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡೊಂಬಿವಲಿ ಅಯ್ಯಪ್ಪ ಮಂದಿರದ ಹ ಸ್ಥಾಪಕ ಸದಸ್ಯ, ಜೀರ್ಣೋದ್ಧಾರ ಸಮತಿಯ ಅಧ್ಯಕ್ಷ, ವರ್ತಕನಗರ ಕನ್ನಡ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಥಾಣೆ ಬಂಟರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ, ಹಲವಾರು ಸಂಘ ,ಹುಟ್ಟೂರ ಸಂಘಸಂಸ್ಥೆಗಳಲ್ಲೂ ಗುರುತಿಸಿಕೊಂಡಿರುತ್ತಾರೆ.











