ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನಿವೃತ್ತ ಅಂಚೆ ಇಲಾಖೆ ಸಿಬ್ಬಂದಿ ಅಂಪಾರಿನ ರತ್ನಾಕರ ಕಿಣಿ (ಆರ್ ಕೆ. ಯವರನ್ನು) ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕುಂದಾಪುರ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರತ್ನಾಕರ ಕಿಣಿಯವರು ಕುಂದಗನ್ನಡ ಅಜ್ಜಿಕತೆ, ಭತ್ತಕುಟ್ಟುವ ಹಾಡು ಹಾಗೂ ಸ್ವರಚಿತ ಕುಂದಾಪ್ರ ಕನ್ನಡ ಹಾಡೊಂದನ್ನು ವಾಚಿಸಿದರು ಇದೇ ಸಂದರ್ಭ ಕುಂದಾಪ್ರ ಭಾಷೆಯ ಅನನ್ಯತೆ ಮತ್ತು ಸಾಂಸ್ಕ್ರತಿಕ ಮಹತ್ವದ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿ, ಕನ್ನಡ ವಿಭಾಗದ ಉಪನ್ಯಾಸಕರಾದ ಸುಕುಮಾರ್ ಶೆಟ್ಟಿ ಕಮಲಶಿಲೆ ಅತಿಥಿಯನ್ನು ಪರಿಚಯಿಸಿ, ರೇಷ್ಮಾ ಶೆಟ್ಟಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ವಂದಿಸಿದರು. ಸ್ವಚ್ಛತಾ ಸಿಬ್ಬಂದಿ ರತ್ನಾ ಪ್ರಾರ್ಥಿಸಿ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರೀಶ್ ಕಾಂಚನ್ ನಿರೂಪಿಸಿದರು.











