ಬೈಂದೂರು :ತ್ರಾಸಿ ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

0
588

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಂಗಳವಾರ ತ್ರಾಸಿ ಬೀಚಿನಲ್ಲಿ ಈಜಲು ಹೋಗಿ ಸಮುದ್ರಪಾಲಾಗಿದ್ದ ಗದಗ ಮೂಲದ ಯುವಕ ಪೀರ್ ಸಾಬ್ ನ ಮೃತದೇಹ ಬುಧವಾರ ಬೆಳಿಗ್ಗೆ ಸಮೀಪದ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.

Click Here

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಿವಾಸಿಯಾಗಿರುವ ಪೀರ್ ಸಾಬ್(21), 2 ತಿಂಗಳ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದು ಕಾಪು ತಾಲ್ಲೂಕಿನ ಮುದರಂಗಡಿಯಲ್ಲಿ ವಾಸವಾಗಿದ್ದನು. ಊರಿನಿಂದ ಮಂಗಳವಾರ ಸಿರಾಜ್ ಎಂಬುವರು ಲಾರಿಯಲ್ಲಿ ಬಂದಿದ್ದು, ಆತನ ಜೊತೆಗೆ ಪೀರ್ ಸಾಬ್ ಹಾಗೂ ಸ್ನೇಹಿತ ಸಿದ್ಧಪ್ಪ ಊರಿಗೆ ಹೊರಟಿದ್ದರು. ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ತ್ರಾಸಿ ಬೀಚಿನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದಲ್ಲಿ ಈಜಲು ನೀರಿಗಿಳಿದ ಪೀರ್ ಸಾಬ್ ಅಲೆಗೆ ಕೊಚ್ಚಿ ಹೋಗಿದ್ದರು.

ಸ್ಥಳೀಯ ಆಂಬುಲೆನ್ಸ್ ಡ್ರೈವರ್ ಸಮಾಜಸೇವಕ ಇಬ್ರಾಹಿಂ ಗುಂಗೊಳ್ಳಿ ಹಾಗೂ ತಂಡ, ಜೀವ ರಕ್ಷಕ ಈಜುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ ಮತ್ತು ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ಹಾಗೂ ಗಂಗೊಳ್ಳಿ ಪೊಲೀಸರು ಶೋಧ ನಡೆಸಿದ್ದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here