ತ್ರಾಸಿ ಬೀಚಿನಲ್ಲಿ ಈಜಲು ಹೋದ ಗದಗ ಮೂಲದ ಯುವಕ ಸಮುದ್ರಪಾಲು

0
924

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್ ನಲ್ಲಿ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಬೀಚ್‌ನಲ್ಲಿ ಈಜಲು ಹೋದ ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್, ನೀರುಪಾಲಾದ ಘಟನೆ ಸಂಭವಿಸಿದೆ,

Click Here

ಮಧ್ಯಾಹ್ನದ ವೇಳೆ ಸಮುದ್ರದ ನೀರಿಗೆ ಈಜಲು ಇಳಿದಿದ್ದು, ಮೂವರು ಯುವಕರು ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ.. ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗುಂಗೊಳ್ಳಿ ಹಾಗೂ ತಂಡ, ಜೀವ ರಕ್ಷಕ ಈಜುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ ಮತ್ತು ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ಹಾಗೂ ಗಂಗೊಳ್ಳಿ ಪೊಲೀಸರು ಹುಡುಕಾಟ ಕಾರ್ಯಚರಣೆ ನಡೆಸುತ್ತಿದ್ದಾರೆ.

ಸಮುದ್ರದ ಅಬ್ಬರದ ಅಲೆ ಇರುವುದರಿಂದ ಕಾರ್ಯಚರಣೆ ಮೊಟುಕುಗೊಳಿಸಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ತನಕ ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ.

Click Here

LEAVE A REPLY

Please enter your comment!
Please enter your name here