ಕುಂದಾಪುರ :ಹಿರಿಯ ಛಾಯಾಗ್ರಾಹಕ ಭಾರತ್ ಸ್ಟುಡಿಯೋ ಮಾಲಕ ರಾಬರ್ಟ್ ಡಿಸೋಜ ನಿಧನ

0
388

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘದ ಸ್ಥಾಪಕಾಧ್ಯಕ್ಷ, ಹಿರಿಯ ಛಾಯಾಗ್ರಾಹಕ, ಭಾರತ್ ಸ್ಟುಡಿಯೋ ಮಾಲಕ, ಹಾಲಿ ಗೌರವಾಧ್ಯಕ್ಷ ರಾಬರ್ಟ್ ಡಿಸೋಜಾ (77) ಇಂದು ಬೆಳಿಗ್ಗೆ ನಿಧನರಾದರು.

ಕುಂದಾಪುರದ ಅತ್ಯಂತ ಹಿರಿಯ ಛಾಯಾಗ್ರಾಹಕರಲ್ಲಿ ಒಬ್ಬರಾದ ರಾಬರ್ಟ್, ಸಾಗರದ ಬಸಂತ್ ಸ್ಟುಡಿಯೋದಲ್ಲಿ ಆರಂಭಿಕ ವೃತ್ತಿ ಆರಂಭಿಸಿ ಬಳಿಕ ಕುಂದಾಪುರದ ಮಾಸ್ತಿಕಟ್ಟೆ ರಸ್ತೆಯಲ್ಲಿ ಭಾರತ್ ಸ್ಟುಡಿಯೋ ಆರಂಭಿಸಿದ್ದರು.

Click Here

ಸುಮಾರು ಆರು ದಶಕಗಳ ಕಾಲ ಛಾಯಾಚಿತ್ರಗ್ರಾಹಕರಾಗಿದ್ದ ರಾಬರ್ಟ್ ತನ್ನ ಕೊನೆಗಾಲದ ವರೆಗೂ ಫೋಟೊಗ್ರಾಫರ್ ಆಗಿಯೇ ಇದ್ದವರು. ಕುಂದಾಪುರ ತಾಲೂಕು ಫೋಟೊಗ್ರಾಫರ್ಸ್ ಅಸೋಸಿಯೇಷನ್ ಸಂಸ್ಥೆಯನ್ನು ಆರಂಭಿಸಿ ಸ್ಥಾಪಕಾಧ್ಯಕ್ಷರಾದವರು. ಈಗಲೂ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದರು.

ರಾಬರ್ಟ್ ಡಿಸೋಜಾ ಅವರು ಪತ್ನಿ ಢೆಲ್ಫಿನ್, ಮೂವರು ಮಕ್ಕಳು, ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಓರ್ವ ಪುತ್ರ ಫಾದರ್ ಆಗಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಗೆ ಕುಂದಾಪುರದ ಹೋಲಿರೋಜರಿ ಚರ್ಚಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Click Here

LEAVE A REPLY

Please enter your comment!
Please enter your name here