ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸ್ನೇಹಿತನೊಂದಿಗೆ ಬಂದ ಯುವಕನೊಬ್ಬ ಅರಶಿನಗುಂಡಿ ಜಲಪಾತಕ್ಕೆ ಬಿದ್ದು ನಾಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯ ಕೆ.ಹೆಚ್.ನಗರ ನಿವಾಸಿ ಮುನಿಸ್ವಾಮಿ ಎಂಬುವರ ಮಗ ಶರತ್ (23) ನಾಪತ್ತೆಯಾದವ.
*ಘಟನೆಯ ವಿವರ*: ಶರತ್ ತನ್ನ ಸ್ನೇಹಿತ ಗುರುರಾಜ ನೊಂದಿಗೆ KA 28 Z 5854 ನೇ ಕಾರಿನಲ್ಲಿ ಭಾನುವಾರ ಬೆಳಿಗ್ಗೆ 7:30 ಗಂಟೆಗೆ ಭದ್ರಾವತಿಯಿಂದ ಕೊಲ್ಲೂ ರಿಗೆ ಹೊರಟಿದ್ದರು.
ಮಧ್ಯಾಹ್ನ ಸುಮಾರು3.30ಕ್ಕೆ ಕೊಲ್ಲೂರಿನ ಅರಶಿನ ಗುಂಡಿ ಜಲಪಾತದ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸೌಪರ್ಣಿಕ ನದಿಗೆ ಬಿದ್ದಿದ್ದಾನೆ.
ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿರುವ ಶರತ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











