ಸುಂದರ ಹಾಗೂ ಸ್ವಚ್ಛ ಸಾಲಿಗ್ರಾಮ ಮಾಡಲು ಪೌರಕಾರ್ಮಿಕರ ಪಾತ್ರ ಗಣನೀಯವಾದದ್ದು -ಸುಲತಾ ಹೆಗ್ಡೆ

0
400

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಸ್ವಚ್ಛ ಹಾಗೂ ಸುಂದರ ಪಟ್ಟಣಪಂಚಾಯತ್ ಗೆ ಪೌರ ಕಾರ್ಮಿಕರ ಕೊಡುಗೆ ಅಪಾರವಾದದ್ದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಹೇಳಿದರು.

ಸಾಲಿಗ್ರಾಮ ಪ.ಪಂ ಆಶ್ರಯದಲ್ಲಿ ಪೌರ ಕಾರ್ಮಿಕರ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿಗಿನ ದಿನಗಳಲ್ಲಿ ಪೌರಕಾರ್ಮಿಕ ಬಗ್ಗೆ ಗೌರವ ಹೆಚ್ಚಾಗಿದೆ, ಇದಕ್ಕೆ ಕಾರಣ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡ ಸ್ವಚ್ಛತಾ ಆಂದೋಲ ಮುಖ್ಯ ಕಾರಣ ಎಂದರು.

ಗ್ರಾಮ ಅಥವಾ ಪಟ್ಟಣ ಸುಂದರವಾಗಿಸಲು ಪೌರಕಾರ್ಮಿಕರು ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಹ ಪೌರ ಕಾರ್ಮಿಕರಿಗೆ ಸರಕಾರದಿಂದ ವಿವಿಧ ರೀತಿಯ ಸೌಲಭ್ಯಗಳನ್ನು ಹೆಚ್ಚಿಸಿದೆ ಇದು ಶ್ಲಾಘನೀಯ,ಪೌರ ಕಾರ್ಮಿಕರು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಒಳ್ಳೆಯ ಜೀವನಕ್ಕೆ ಮುನ್ನುಡಿ ಬರೆಯ ಬೇಕಾದ ಅವಶ್ಯಕತೆ ಇದೆ ಎಂದು ಶುಭಹಾರೈಸಿದರು.

Click Here

ಈ ಸಂದರ್ಭದಲ್ಲಿ15ಕ್ಕೂ ಅಧಿಕ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಪಟ್ಟಣಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ,ಮುಖ್ಯಾಧಿಕಾರಿ ಶಿವ ನಾಯ್ಕ್,ಉಪಾಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ,ಸದಸ್ಯರಾದ ರಾಜು ಪೂಜಾರಿ,ಗಿರಿಜಾ ಪೂಜಾರಿ,ರೇಖಾ ಕೇಶವ ಕರ್ಕೇರ,ಸುಕನ್ಯಾ ಶೆಟ್ಟಿ,ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ,ಪೌರ ಕಾರ್ಮಿಕ ಪ್ರದೀಪ,ಪಟ್ಟಣಪಂಚಾಯತ್ ಸಿಬ್ಬಂದಿ ಸುಮಿತ್ರ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಸಿಬ್ಬಂದಿ ಚಂದ್ರಶೇಖರ್ ಸೋಮಯಾಜಿ ನಿರೂಇಸಿ ನಿರ್ವಹಿಸಿದರು.ಕಾರ್ಯಕ್ರಮದ ನಂತರ ಕೋವಿಡ್ ನಿಯಮಾನುಸಾರ ಸಾಂಸ್ಕ್ರತಿಕ,ಆಟೋಟ ಕಾರ್ಯಕ್ರಮ ನೆರವೆರಿತು.

Click Here

LEAVE A REPLY

Please enter your comment!
Please enter your name here