ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಆಶ್ರಯದಲ್ಲಿ ರೋಟರಿ ಜಿಲ್ಲೆ 3182 ಇದರ ವಲಯ 3ರ,ಮೂಲ ಶಿಕ್ಷಣ ಮತ್ತುಸಾಕ್ಷರತಾ ಸೆಮಿನಾರ್ ಚೇತನಾ ಪ್ರೌಡ ಶಾಲೆಯ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ಜಿಲ್ಲಾ ಸಭಾಪತಿ ಜನಾರ್ಧನ ಭಟ್ ಶಂಕರನಾರಾಯಣ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಭಾಪತಿಗಳಾದ ಅಶೋಕ್ ಕುಮಾರ್ ಶೆಟ್ಟಿ, ರವಿರಾಜ ಶೆಟ್ಟಿ ಜಿಲ್ಲಾ, ಸುರೇಶ ಬಿ, ಕರುಣಾಕರ ಶೆಟ್ಟಿ , ಜಿಲ್ಲಾ ಸಹಾಯಕ ಸಭಾಪತಿ ಬಾಲಚಂದ್ರ ಶೆಟ್ಟಿ , ಜಿಲ್ಲಾ ಸಹಾಯಕ ತರಬೇತುದಾರ ಸಿ ಎ ದೇವಾನಂದ್, ವಲಯ 3ರ ವಲಯ ಸೇನಾನಿಗಳಾದ ವಿಜಯ್ ಕುಮಾರ್ ಶೆಟ್ಟಿ, ಬ್ರಾನ್ ಡಿಸೋಜಾ ಹಾಗೂ ಕ್ಲಬ್ ಸದಸ್ಯ ಕರುಣಾಕರ ಶೆಟ್ಟಿ ಕ್ಲಬ್‍ನ ಸಮುದಾಯ ಸೇವೆ ನಿರ್ದೇಶಕ ಮಂದಾರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಯಶೋದ ಹೊಳ್ಳ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೇಶವ ಗಾಣಿಗ ಆಹ್ವಾನಿತರ ಪಟ್ಟಿ ವಾಚಿಸಿದರು, ವಲಯ 3ರ ಸಹಾಯಕ ಗವರ್ನರ್ ಕೆ ಪದ್ಮನಾಭ ಕಾಂಚನ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿಜ್ಞೇಶ್ವರ ಅಡಿಗ ವಂದಿಸಿದರು.











