ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ಬ್ಯಾಂಕಿನ ಪೂರ್ವ ಅಧ್ಯಕ್ಷ ಪೊಳಲಿ ಜಯರಾಮ ಭಟ್ಟರ ನಿಧನಕ್ಕೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕಂಬನಿ ಮಿಡಿದಿದ್ದಾರೆ.
ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಸ್ಪ್ರಹ ಸೇವೆ ಸಲ್ಲಿಸಿ, ಅಪಾರ ಜನಮನ್ನಣೆಗೆ ಪಾತ್ರರಾಗಿದ್ದ ಜಯರಾಮ ಭಟ್ಟರ ಮತ್ತು ನನ್ನ ಒಡನಾಟವು ಎರಡು ದಶಕಗಳಿಗೂ ಮಿಕ್ಕಿದ್ದಾಗಿದ್ದು ಅವರ ಅಕಾಲಿಕ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಡಾ.ಕೆ.ಎಸ್.ಕಾರಂತ್ ಹೇಳಿದ್ದಾರೆ.











