ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ‘ವಿಶ್ವ ಹಸಿರು ಕಟ್ಟಡ ಸಪ್ತಾಹ’ ಸ್ವಚ್ಛ ಕಡಲತೀರ, ಹಸಿರು ಕೋಡಿ ಅಭಿಯಾನ

0
378

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲತೀರದ ಸ್ವಚ್ಛತಾ ಕಾರ್ಯಕ್ರಮ ಭಾನುವಾರದಂದು ನಡೆಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ “ಇವತ್ತಿನ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳೆಂದರೆ ಮಕ್ಕಳು, ಅವರು ಕೈಗೊಂಡ ಈ ಕೆಲಸ ದೇವರ ಕೆಲಸ. ಯಾವುದು ಪರಿಸರದ ಹೊರಗಡೆ ಇದೆಯೋ ಅವೆಲ್ಲವೂ ನಮ್ಮ ದೇಹದ ಒಳಗಡೆ ಸೇರುತ್ತದೆ. ಪರಿಸರ ಕಲುಷಿತಗೊಂಡರೆ ಗಾಳಿ, ನೀರು, ಆಹಾರ ಸೇವನೆಯಿಂದ ನಮ್ಮ ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಂತಹ ವಸ್ತುಗಳ ಬಳಕೆಯನ್ನು ತಡೆಯುವುದು, ಪರಿಸರ ಸ್ನೇಹಿ ವಸ್ತುಗಳನ್ನು ಮರುಬಳಕೆಗೆ ಒಳಪಡಿಸುವುದು ಈ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬಹುದು” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮ ರೂಪಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯ್ಯದ್ ಮೊಹಮ್ಮದ್ ಬ್ಯಾರಿಯವರು ಮಾತನಾಡಿ ” ಕೋಡಿ ಕಡಲತೀರ ಸ್ವಚ್ಛತೆ, ಹಸಿರು ಕೋಡಿ ಯೋಜನೆಯಿಂದ ವಿಶ್ವದಲ್ಲಿ ಕೋಡಿ ಪರಿಸರವು ವಿಶೇಷವಾಗಿ ಗುರುತಿಸಲ್ಪಡುವಂತಾಗಬೇಕೆಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

Click Here

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ದೋಮ ಚಂದ್ರಶೇಖರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ . ಎಮ್ ಅಬ್ದುಲ್ ರೆಹೆಮಾನ್, ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮೇಶ್ ನಾಯಕ್ , ಪುರಸಭಾ ಸದಸ್ಯರುಗಳಾದ ಕಮಲಾ, ಲಕ್ಷ್ಮೀ , ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ನಾಗರಾಜ್ ಕಾಂಚನ್ , ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಸಿದ್ದಪ್ಪ ಕೆ. ಎಸ್, ಡಾ. ಶಮೀರ್ , ಡಾ . ಫಿರ್ದೋಸ್ , ಅಶ್ವಿನಿ ಶೆಟ್ಟಿ , ಜಯಂತಿ , ದುರ್ಗಿ ಪಟೆಗಾರ್ , ಸುಮಿತ್ರಾ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ್.ಕೆ, ಕೋಶಾಧಿಕಾರಿ ಅಬ್ದುಲ್.ಕೆ , ಸದಸ್ಯರಾದ ಶ್ರೀ ಶಂಕರ್ ಪೂಜಾರಿ , ಶ್ರೀ ಸಂಜೀವ ಪೂಜಾರಿ , ಭಾಸ್ಕರ್ ಪುತ್ರನ್ , ರಫೀಕ್ , ತಿಮ್ಮಪ್ಪ ಖಾರ್ವಿ , ರಾಮಕೃಷ್ಣ ಪೂಜಾರಿ , ಗೋಪಾಲ ಪೂಜಾರಿ , ಶಿಕ್ಷಕ ರಕ್ಷಕ ಸಂಘದ ಮುಖ್ಯ ಸಲಹೆಗಾರರಾದ ಅಬುಶೇಕ್ , ಉಪಾಧ್ಯಕ್ಷರಾದ ಮುಸ್ತರಿನ್, ಪ್ರಕಾಶ್, ಖಜಾಂಚಿ ರಫೀಕ್ , ಊರಿನ ಪ್ರಮುಖರು , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು, ಹಳೆವಿದ್ಯಾರ್ಥಿಗಳು , ಊರಿನ ಯುವಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳೂ ಸೇರಿದಂತೆ ಎಲ್ಲರೂ ಹಳಅಳಿವೆಯಿಂದ ಡೆಲ್ಟಾ ಪಾಯಿಂಟ್ ವರೆಗಿನ ಕಡಲತೀರದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಜಯಶೀಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು .

Click Here

LEAVE A REPLY

Please enter your comment!
Please enter your name here