ಕುಂದಾಪುರ ಮಿರರ್ ಸುದ್ದಿ…
ಕೋಟ: ಪರಿಸರಸ್ನೇಹಿ ಕಾರ್ಯಕ್ರಮದೊಂದಿಗೆ ನಮ್ಮೆಲ್ಲ ಗ್ರಾಮಗಳು ಶುಚಿಗೊಳ್ಳುತ್ತದೆ ಇದಕ್ಕೆ ಈ ಭಾಗದ ಸಂಘಸಂಸ್ಥೆಗಳೇ ಸಾಕ್ಷಿ ಎಂದು ಕೋಟದ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹೇಳಿದರು.


ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್ ಮಣೂರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷಸೌರಭ ಕಲಾ ರಂಗ ಕೋಟ, ಹಂದಟ್ಟು ಮಹಿಳಾ ಬಳಗ, ಸಹಯೋಗದೊಂದಿಗೆ ಪ್ರತಿ ಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಕೋಟತಟ್ಟು ಹಾಡಿವಿಷ್ಣುಮೂರ್ತಿ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ಒಂದು ಕಾರ್ಯಕ್ರಮ ಒಂದೆರಡು ದಿನಗಳಿಗೆ ಸಿಮಿತಗೊಲಿಸಲು ಸಾಧ್ಯವಿದೆ ಆದರೆ ಇಲ್ಲಿ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮಗಳು ಎಲ್ಲಾ ಭಾಗದಲ್ಲಿ ನಡೆಯುವಂತ್ತಾಗಲಿ ಸ್ವಚ್ಛತೆಯ ಧ್ಯೇಯ ಎಲ್ಲರ ಮನೆಮನದಲ್ಲಿನೆಲೆಯೂರಲಿ ಎಂದು ಹಾರೈಸಿ ಚಾಲನೆ ನೀಡಿದರು.
ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಜಿತ್ ಆಚಾರ್ಯ, ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್ಯ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ವನೀತಾ ಉಪಾಧ್ಯ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಹಂದಟ್ಟು ,ಕಟ್ಟೆ ಗೆಳೆಯರು ಹಂದಟ್ಟು ಚೆಚ್ಚಕೆರೆ ಇದರ ರವಿ ಪೂಜಾರಿ,ಮತ್ತಿತರರು ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪಕರಾದ ಮಹೇಶ್ ಬಾಯಿರಿ ,ಸುಜಾತ ಬಾಯಿರಿ ಮತ್ತಿತರರು ಸಹಕರಿಸಿದರು.











