ಮಣೂರು -ರೈತರು ಬೆಳೆದ ಬೆಳೆಗಳಿಗೆ ಬೆಂಬಲೆ ಬೆಲೆ ಘೋಷಿಸಿ ದೇವಸ ರವೀಂದ್ರ ಶೆಟ್ಟಿ

0
448

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ರೈತರು ಬೆಳೆದ ಬೆಳೆಗಳಿಗೆ ಸರಕಾರ ನಿರ್ದಿಷ್ಟ ಬೆಂಬಲ ಬೆಲೆ ಘೋಷಿಸಬೇಕು ಎಂದು ಮಣೂರು ಪ್ರಗತಿಪರ ಹಿರಿಯ ಕೃಷಿಕ ರವೀಂದ್ರ ಶೆಟ್ಟಿ ದೇವಸ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಗೀತಾನಂದ ಫೌಂಡೇಶನ್ ಮಣೂರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್, ಮಹಿಳಾ ಬಳಗ ಹಂದಟ್ಟು,ರೈತಧ್ವನಿ ಸಂಘ ಕೋಟ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ 10ನೇ ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ರೈತನೇ ದೇಶದ ಆಸ್ತಿಯಾಗಿದ್ದಾನೆ. ಅಂತಹ ರೈತನು ಬೆಳೆದ ಭೆಳೆಗಳಿಗೆ ನ್ಯಾಯೋಚಿತ ಬೆಲೆಗಳು ಸಿಗುತ್ತಿಲ್ಲ ಅಲ್ಲದೆ ಸರಕಾರದ ವಿವಿಧ ರೀತಿಯ ಸೌಲಭ್ಯಗಳು ಮೆಲ್ನೋಟಕ್ಕೆ ಘೋಷಿಸುತ್ತದೆ ಸಮರ್ಪಕ ಅನುಷ್ಠಾನ ಶೂನ್ಯ ಎಂದರಲ್ಲದೆ .ಸರಕಾರ ರೈತರ ಅಭಿವೃದ್ಧಿಗೆ ಪ್ರೇರಕವಾಗುವ ಕಾರ್ಯಕ್ರಮಗಳನ್ನು ಘೋಷಿಸಬೇಕು ಆಗಮಾತ್ರ ಕೃಷಿ ಉಳಿಯಲು ಸಾಧ್ಯ ಇದರಿಂದ ಯುವಕರು ಕೃಷಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಮಣೂರು ಭಾಸ್ಕರ್ ಶೆಟ್ಟಿ ರವೀಂದ್ರ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಿದರು.

Click Here

ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ ,ಕೋಟ ಪಂಚಾಯತ್ ಸದಸ್ಯ ಪ್ರಶಾಂತ್ ಹೆಗ್ಡೆ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಅಧ್ಯಕ್ಷೆ ಜ್ಞಾಹ್ನವಿ ಹೇರ್ಳೆ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಯುವಕ ಮಂಡಲದ ಗೌರವ ಸಲಹೆಗಾರ ಉಮೇಶ್ ಪ್ರಭು,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸುಜಾತ ಬಾಯಿರಿ ನಿರೂಪಿಸಿದರು.ಪಂಚವರ್ಣದ ಸಂಚಾಲಕ ಅಜಿತ್ ಆಚಾರ್ಯ ವಂದಿಸಿದರು.

Click Here

LEAVE A REPLY

Please enter your comment!
Please enter your name here