ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯ ಬಿ. ವೈ ರಾಘವೇಂದ್ರ ಅಭಿಮಾನಿಗಳ ನೇತೃತ್ವದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ವಂಡ್ಸೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಯಿತು.
ಗೋ ಪೂಜೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಿಡ ನೆಡುವುದು, ವಿಶೇಷಚೇತನರಿಗೆ ಹಾಗೂ ಅಶಕ್ತರಿಗೆ ಆಹಾರ ಸಾಮಗ್ರಿ ವಿತರಣೆ, ಆಶಾ ಕಾರ್ಯಕರ್ತೆಯರು, ಹಿರಿಯ ನಾಗರೀಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರಾದ ವಿ.ಕೆ ಶಿವರಾಮ ಶೆಟ್ಟಿ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮುತಾಲಿ, ನಿರ್ಮಲ ವಂಡ್ಸೆ, ಜಯಂತಿ ಶೆಟ್ಟಿ, ಸುಧಾಕರ ಮಡಿವಾಳ, ಮಹೇಶ್ ಗಾಣಿಗ, ಮಣಿಕಂಠ ಗಾಣಿಗ, ಸುಧೀರ್ ಶೆಟ್ಟಿ, ರೇಖಾ ಶೆಟ್ಟಿ, ಗೋಪಾಲ ಶೆಟ್ಟಿ, ರಾಘವೇಂದ್ರ ನೆಂಪು, ಉಮೇಶ, ಮಂಜು, ಸಚಿನ್, ವಿನುತಾ, ರಾಜು ಸೀತಾ-ಗೀತಾ ಉಪಸ್ಥಿತರಿದ್ದರು.











