Video:
ಕುಂದಾಪುರ ಮಿರರ್ ಸುದ್ದಿ..

ಕುಂದಾಪುರ : ಕುಂದನಾಡು ರೈತ ಉತ್ಪಾದಕ ಕಂಪೆನಿ ವಂಡ್ಸೆ ಹೋಬಳಿ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘ, ಅಂಪಾರು ಗ್ರಾ.ಪಂ., ರೋಟರಿ ಕ್ಲಬ್ ಅಂಪಾರು, ವನಶ್ರೀ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಹಡಾಳಿಯಲ್ಲಿ ನಡೆದಿದ್ದ ಹಡಿಲು ಭೂಮಿ ಭತ್ತದ ಕೃಷಿ ಗದ್ದೆಯಲ್ಲಿ ಶನಿವಾರ ಬೆಳೆ ಸಂರಕ್ಷಣಾ ಕಾರ್‍ಯಕ್ರಮ ನಡೆಯಿತು.
ಜುಲೈನಲ್ಲಿ ಹಡಾಳಿಯಲ್ಲಿ ೧೨ ಎಕರೆ ಹಡಿಲು ಭೂಮಿ ನಾಟಿ ಮಾಡಲಾಗಿತ್ತು. ಆ ನಾಟಿ ಮಾಡಿರುವ ಗದ್ದೆಗಳಲ್ಲಿ ಕಳೆ ತೆಗೆಯುವ ಮೂಲಕ ಬೆಳೆ ಸಂರಕ್ಷಣಾ ಕಾರ್‍ಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯಿತು.
ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಹಡಿಲು ಭೂಮಿ ಕೃಷಿಗೆ ಪೂರಕವಾಗಿ ಈ ಕಾರ್‍ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಹಡಿಲು ಭೂಮಿ ಕೃಷಿಯಿಂದ ಉತ್ತೇಜನಗೊಂಡು, ಈ ಭಾಗದ ಇನ್ನಷ್ಟು ರೈತರು ತಮ್ಮ ಭೂಮಿಯನ್ನು ಕೃಷಿ ಮಾಡುವಂತೆ ಕೋರಿಕೊಂಡಿದ್ದಾರೆ. ಕಂಪೆನಿ ವತಿಯಿಂದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕುಂದನಾಡು ರೈತ ಉತ್ಪಾದಕ ಸಂಸ್ಥೆ ನಿರ್ದೇಶಕರಾದ ಮಲ್ಲಿಕಾ ಶೆಟ್ಟಿ, ಜ್ಯೋತಿ ಶೆಟ್ಟಿ, ಕಾರ್‍ಯನಿರ್ವಹಣಾಧಿಕಾರಿ ಅಜಿತ್ ಆಚಾರ್ಯ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಅಶೋಕ್, ನಿರ್ದೇಶಕ ಚಂದ್ರಶೇಖರ ಉಡುಪ, ಸಂಜೀವಿನಿ ಒಕ್ಕೂಟದ ಅವಿನಾಶ್, ಯತೀಶ್,ವನಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಶನಿ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಗಣೇಶ್ ಮೊಗವೀರ, ನಂದಿನಿ, ಕಾವ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ಕಾಳಿಂಗ ಶೆಟ್ಟಿ, ಸಿದ್ದಾಪುರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅಂಪಾರು ಯುವ ಮಂಡಲದ ಅಧ್ಯಕ್ಷ ಉಮೇಶ್ ಕೋಟ್ಯಾನ್, ಕೃಷಿ ಸಖಿ ಭಾರತಿ ಶೆಟ್ಟಿ, ಪಶು ಸಖಿ ರೂಪಾ, ಎಂಬಿಕೆ ಸಂಜೀವಿನಿ ಒಕ್ಕೊಟದ, ಎಂಸಿಆರ್‌ಪಿ, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು











