ಕುಂದಾಪುರ ಮಿರರ್ ಸುದ್ದಿ…
ಕೋಟ: ಅಧ್ಯಯನದ ಜೊತೆಗೆ ಯಕ್ಷಗಾನ ಕಲೆಯನ್ನು ಕಲಿತಾಗ ಮಕ್ಕಳಲ್ಲಿ ಆತ್ಮಸ್ಥೈರ್ಯ ಜಾಗೃತಿಯಾಗಿ,ಮಕ್ಳಳು ಯಾವುದೇ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲರೆಂದು ಯಕ್ಷ ಗುರುಗಳಾದ ದೇವದಾಸರಾವ್ ಕೂಡ್ಲಿ ಹೇಳಿದರು.
ಅವರು ಭಾನುವಾರದಂದು ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇದರ ಆರನೇ ವರ್ಷದ ಮಕ್ಕಳ ಯಕ್ಷಗಾನ,ತಾಳ ಹೆಜ್ಜೆ ,ತರಗತಿಗೆ ಚಾಲನೆ ನೀಡಿ ಮಾತನಾಡಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಕೀಲ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಒತ್ತಡವನ್ನು ನಿವಾರಣೆ ಮಾಡುವ ಯಕ್ಷಗಾನ ಕಲೆಯನ್ನು ಎಲ್ಲಾ ಮಕ್ಕಳು ಕಲಿತು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿ ಕಲಾರಂಗದ ಯಕ್ಷ ಸೇವೆಯನ್ನು ಶ್ಲಾಘಿಸಿದರು. ಕಲಾರಂಗದ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪಿಡಿಓ ಸತೀಶ್ ವಡ್ಡರ್ಸೆ ಸ್ವಾಗತಿಸಿ, ನಿರೂಪಣೆಗೈದರು. ಕಲಾರಂಗದ ಸರ್ವ ಸದಸ್ಯರು, ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು.











