ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳೆ ಅದರ ಸಾಧನೆ ತೋರ್ಪಡಿಸುತ್ತದೆ – ಸತೀಶ್ ಕುಂದರ್

0
420

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳೆ ಅದರ ಸಾಧನೆಯ ಮಜಲುಗಳನ್ನು ತೋರ್ಪಡಿಸುತ್ತದೆ ಎಂದು ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನಕ್ಕೆ 176ನೇ ವಾರದ ಸಂಭ್ರಮ ಆ ಪ್ರಯುಕ್ತ ಹಾಲು ಉತ್ಪಾದಕರ ಸಹಕಾರ ಸಂಘ ಕೋಟತಟ್ಟು ಪಡುಕರೆ ಸಂಯೋಜನೆಯೊಂದಿಗೆ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಸಂಸ್ಥೆ ಹೇಗಿರಬೇಕು ಎಂಬುವುದನ್ನು ಪಂಚವರ್ಣ ಸಂಸ್ಥೆ ತೋರಿಸಿಕೊಟ್ಟಿದೆ.ತನ್ನ ಇತಿಮಿತಿಯೊಳಗೆ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಅದರ ಕಾರ್ಯಗಳು ಜನಮನ ಗೆದ್ದಿದೆ ಎಂದರಲ್ಲ ಪರಿಸರದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅತ್ಯವಶ್ಯಕ ಈ ನಿಟ್ಟಿನಲ್ಲಿ ಪ್ರತಿಯೊಂದುಮನೆಯಲ್ಲೂ ಗಿಡನೆಟ್ಟು ಪೋಷಿಸುವ ಕೆಲಸ ಆಗಲಿ ಎಂದು ಹಾರೈಸಿದರು.

Click Here

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾಲು ಉತ್ಪಾದಕರಿಗೆ ಗಿಡಗಳನ್ನು ವಿತರಿಸಲಾಯಿತು.

ಹಾಲು ಉತ್ಪಾದಕರ ಸಹಕಾರ ಸಂಘ ಕೋಟತಟ್ಟು ಪಡುಕರೆ ಅಧ್ಯಕ್ಷ ಶಿವಮೂತಿ ಕೆ ಅಧ್ಯಕ್ಷತೆ ವಹಿಸಿದ್ದರು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು, ಕಾರ್ಯದರ್ಶಿ ಲಲಿತ ಪೂಜಾರಿ,ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ವೀಣಾ ಉಪಾಧ್ಯ,ಕೋಟ ಗ್ರಾಮಪಂಚಾಯತ್ ಮಾಜಿ ಸದಸ್ಯ ವಿಜಯ ಕುಂದರ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರನವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here