ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ ವಾರ್ಷಿಕ ಮಹಾಸಭೆಯು ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಆ.19 ರಂದು ನಡೆಯಿತು.
ಸಭೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಆತ್ಮೀಕಾ ಅವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.
ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನಿನ ಅಧ್ಯಕ್ಷ ಅಂಪಾರು ಜಗನ್ನಾಥ್ ಶೆಟ್ಟಿ, ಸಹಕಾರಿ ಕಾನೂನು ಸಲಹೆಗಾರರಾದ ಮಂಜುನಾಥ್ ಎಸ್ ಕೆ, ಸೌಹಾರ್ದ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್, ಉಪಾಧ್ಯಕ್ಷರಾದ ನರಸಿಂಹ ನಾಯ್ಕ್, ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು ಸಿಬ್ಬಂದಿ ನಿತಿನ್ ಉಪಸ್ಥಿತರಿದ್ದರು.
ಸಹಕಾರಿ ಅಧ್ಯಕ್ಷ ಸತೀಶ್ ಕೆ ನಾಯ್ಕ್ ವರದಿ ವಾಚಿಸಿ, ಸಿಬ್ಬಂದಿ ಅಕ್ಷಯ್ ಲೆಕ್ಕಪತ್ರ ಮಂಡಿಸಿ, ಮಂಜುನಾಥ್ ಆಚಾರ್ಯ ನಿರೂಪಿಸಿ, ಸಹಕಾರಿ ನಿರ್ದೇಶಕ ಪ್ರಶಾಂತ್ ಶಿರೂರು ವಂದಿಸಿದರು.











