ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ, ಸಾಸ್ತಾನ ಘಟಕದಿಂದ ನಿರ್ಮಲ ಪರಿಸರ ಅಭಿಯಾನ

0
812

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ :
ಗಾಂಧಿ ಜಯಂತಿಯ ಪ್ರಯುಕ್ತ ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ ಸಮಿತಿ ಹಾಗೂ ಸಂತ ಅಂತೋನಿ ಘಟಕ ಸಾಸ್ತಾನ, ಐಸಿವೈಎಮ್, ವೈಸಿಎಸ್ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಿ ಶನಿವಾರ ನಿರ್ಮಲ ಪರಿಸರ ಸ್ವಚ್ಛತಾ ಅಭಿಯಾನ ಜರುಗಿತು.

ಕೆಥೊಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಪರಿಸರ ಸಂಬಂಧಿ ನೀಡಿದ ವಿಶ್ವಪತ್ರ ಲಾವ್ದಾತೊ ಸಿ ಅನ್ವಯ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸ್ವಚ್ಚತಾ ಹಿ ಸೇವಾ ಅಭಿಯಾನದನ್ವಯ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಆದೇಶದಂತೆ ನಿರ್ಮಲ ಪರಿಸರ ನಮ್ಮ ಜವಾಬ್ದಾರಿ ಎಂಬ ಧ್ಯೇಯ ವಾಕ್ಯದಡಿ ಸ್ವಚ್ಚತಾ ಅಭಿಯಾನ ಜರುಗಿತು.

ಕಲ್ಯಾಣಪುರ ವಲಯದ ನಿಯೋಜಿತ ಅಧ್ಯಕ್ಷರಾದ ಲೂಯಿಸ್ ಡಿಸೋಜಾ, ಕೇಂದ್ರಿಯ ಸಮಿತಿಯ ನಿಯೋಜಿತ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ ಮತ್ತು ಸಾಸ್ತಾನ ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂ|ಸುನೀಲ್ ಡಿಸಿಲ್ವಾ ನಿರ್ಮಲ ಪರಿಸರ ನಮ್ಮ ಜವಾಬ್ದಾರಿ ಅಭಿಯಾನಕ್ಕೆ ಜೊತೆಯಾಗಿ ಚಾಲನೆ ನೀಡಿದರು.

Click Here

ಸಾಸ್ತಾನ ಸಂತಅಂತೋನಿ ಚರ್ಚಿನ ಎದುರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಬೆಳೆದು ನಿಂತ ಬೃಹತ್ ಗಾತ್ರದ ಹುಲ್ಲಿನ ಪೋದೆಗಳನ್ನು ಕೆಥೊಲಿಕ್ ಸಭಾ, ಭಾರತೀಯ ಕೆಥೊಲಿಕ್ ಯುವ ಸಂಚಾಲನ, ಯುವ ವಿದ್ಯಾರ್ಥಿ ಸಂಚಾಲನ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ಸದಸ್ಯರು ಸೇರಿಕೊಂಡು ಸವರಿ ತೆಗೆದು ಸ್ವಚ್ಚಗೊಳಿಸಿದರು.

ಕೆಥೊಲಿಕ್ ಸಭಾ ವಲಯ ಕೋಶಾಧಿಕಾರಿ ಉರ್ಬಾನ್ ಲೂವಿಸ್, ಮಾಜಿ ಅಧ್ಯಕ್ಷರಾದ ಸ್ಟೀವನ್ ಪ್ರಕಾಶ್ ಲೂವಿಸ್, ಕೆಥೊಲಿಕ್ ಸಭಾ ಸಾಸ್ತಾನ ಘಟಕ ಅಧ್ಯಕ್ಷೆ ಸಿಂತಿಯಾ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷರಾದ ಸರಿತಾ ಗೊನ್ಸಾಲ್ವಿಸ್, ಐಸಿವೈಎಮ್ ಅಧ್ಯಕ್ಷರಾದ ಆಲ್ವಿಟಾ ಕಾರ್ಡೋಜಾ, ವೈಸಿಎಸ್ ಸಚೇತಕಿ ಅನಿತಾ ಡಿ’ಆಲ್ಮೇಡಾ, ಪದಾಧಿಕಾರಿಗಳಾದ ಜಾನೆಟ್ ಬಾಂಜ್, ವೀರಾ ಪಿಂಟೊ, ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ, ಲೂಯಿಸ್ ಡಿಸೋಜಾ, ಜೊಸೇಫ್ ಡಿಸೋಜಾ, ರೋನಾಲ್ಡ್ ಪಿಂಟೊ, ಮೈಕಲ್ ಲೂವಿಸ್, ಸುಜಾನ್ನಾ ಡಿ.ಆಲ್ಮೇಡಾ, ಪ್ರೀತಿ ಪಿಂಟೊ ಹಾಗೂ ನಾಲ್ಕೂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here