ಕುಂದಾಪುರ ಮಿರರ್ ಸುದ್ದಿ…
ಕೋಟ: ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಕೋಡಿ ಗ್ರಾಮ ಪಂಚಾಯತಿನಲ್ಲಿ ವಿಶೇಷ ಗ್ರಾಮಸಭೆ ಮತ್ತು ಗ್ರಾಮ ನೀರು ನೈರ್ಮಲ್ಯ ಸಮಿತಿ ಸಭೆ ಹಾಗೂ ಸ್ವಚ್ಚತಾ ಕಾರ್ಯಕ್ರಮ ಶನಿವಾರ ಜರಗಿತು.

ಪಂಚಾಯತ್ ಅಧ್ಯಕ್ಷ ಕೆ. ಪ್ರಭಾಕರ ಮೆಂಡನ್,ಸದಸ್ಯರಾದ ಕೃಷ್ಣ ಪೂಜಾರಿ ಪಿ,ಗೀತಾ ಖಾರ್ವಿ,ಮಾಜಿ ಅಧ್ಯಕ್ಷ ಲಕ್ಷ್ಮಣ ಸುವರ್ಣ,ಮಾಜಿ ಸದಸ್ಯರಾದ ಅಣ್ಣಪ್ಪ ಕುಂದರ್,ಹಾಗೂ ಊರಿನ ಪ್ರಮುಖರು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಎಸ್‍ಆರ್ ಎಲ್ಎಮ್ ಸಂಘದ ಪ್ರತಿನಿಧಿಗಳು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.










