ಕುಂದಾಪುರ :ಬೆಂಗಳೂರು – ಮುರುಡೇಶ್ವರ ಪ್ರತ್ಯೇಕ ರೈಲಿಗೆ ಕಾಂಗ್ರೆಸ್ ಆಗ್ರಹ

0
651

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಯುಪಿಎ ಸರಕಾರದ ಅವಧಿಯಲ್ಲಿ ಪ್ರಾರಂಭವಾಗಿದ್ದ ಬೆಂಗಳೂರು – ಮೈಸೂರು – ಕಾರಾವರ ರೈಲು , ಬೆಂಗಳೂರು – ಕಾರಾವರ ನೇರ ರೈಲು ಪಾರಂಭವಾದ ನಂತರ ಕರಾವಳಿಗೆ ರದ್ದಾಗಿ ಮಂಗಳೂರು ತನಕ ಸಂಚರಿಸುತಿತ್ತು .

ಈಗ ಅದೇ ರೈಲು ಮುರುಡೇಶ್ವರದ ತನಕ ವಿಸ್ತರಣೆಗೊಂಡಿದೆ. ಈ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮಾತ್ರ ಕರಾವಳಿ ಜನತೆಗೆ ಅನೂಕೂಲವಾಗಲಿದೆ .ರಾತ್ರಿ 8-15 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮದ್ಯಾಹ್ನ 11 -54 ಕ್ಕೆ ಕುಂದಾಪುರಕ್ಕೆ ಬರಲಿದೆ. ಕುಂದಾಪುರದಿಂದ ಮದ್ಯಾಹ್ನ 3 – 10 ಕ್ಕೆ ಹೊರಟು ಬೆಳಿಗ್ಗೆ 7-15 ಕ್ಕೆ ಬೆಂಗಳೂರು ತಲುಪಲಿದೆ.

Click Here

ಈ ವೇಳಾಪಟ್ಟಿ ಬೆಂಗಳೂರಿಗೆ ತೆರಳುವ ಕುಂದಾಪುರ ಮತ್ತು ಕರಾವಳಿಗರಿಗೆ ಅನೂಕೂಲವಾಗಿಲ್ಲ .ರಾತ್ರಿ ಹೊರಟು ಬೆಳಿಗ್ಗೆ ಕುಂದಾಪುರ – ಬೆಂಗಳೂರು ತಲುಪುವುದಿದ್ದರೆ ಮಾತ್ರ ಕರಾವಳಿಗರಿಗೆ ಅನೂಕೂಲ . ಪಂಚಗಂಗಾ ಎಕ್ಸಪ್ರೆಕ್ಸ ರೈಲಿನ ಟಿಕೆಟ್ 15 ದಿನಗಳ ಮೊದಲೇ ಬುಕ್ ಆಗುತ್ತಿದೆ.

ಪ್ರಸ್ತುತ ಸಂಚರಿಸುತ್ತಿರುವ ರೈಲನ್ನೇ ಹಿಂದೆ ಇರುವಂತೆ ಮುಂದುವರಿಸಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಹೊಸ ರೈಲು ಪ್ರಾರಂಭವೆಂದು ಜನರ ದಿಕ್ಕು ತಪ್ಪಿಸಿ ಸಂಭ್ರಮಿಸುವುದು ಬೇಡಾ.

ಜಿಲ್ಲೆಯ ಬಿಜೆಪಿ ಶಾಸಕರಿಗೆ ಮತ್ತು ಜಿಲ್ಲೆಯ ಸಂಸದರಾಗಿ ಕೇಂದ್ರ ಸಚಿವರಾದವರಿಗೆ ಕರ್ತವ್ಯದ ಮೇಲೆ ಬದ್ಧತೆ ಇದ್ದರೇ ವಂದೇ ಮಾತರಂ ಅಥವಾ ಯಾವುದೇ ಒಂದು ಹೊಸ ರೈಲನ್ನು ಕರಾವಳಿಯಿಂದ ಬೆಂಗಳೂರಿಗೆ ಜನರಿಗೆ ಅನುಕೂಲವಾಗುವ ವೇಳಾಪಟ್ಟಿಯಂತೆ ಪ್ರಾರಂಭಿಸಲಿ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.

Click Here

LEAVE A REPLY

Please enter your comment!
Please enter your name here