ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ಲಾಕ್ ಕಛೇರಿ ಇಂದಿರಾ ಭವನ ಶನಿವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಂಕರ್ ಎ ಕುಂದರ್ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಭಾರ್ಚನೆಗೈದು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮಗಾಂಧಿಜೀ ಕೊಡುಗೆ ಬಹುಮುಖ್ಯವಾದ ಪಾತ್ರ ವಹಿಸಿತ್ತು ಹಾಗೇ ಶಾಸ್ತ್ರಿ ಜೀಯವರ ಕೊಡುಗೆ ಕೂಡಾ ಅನನ್ಯವಾಗಿತ್ತು ಅಂತಹ ಮಹಾನ್ ಪುರುಷರ ಜಯಂತೋತ್ಸವವನ್ನು ಅರ್ಥಪೂರ್ಣ ದಿನವನ್ನಾಗಿಸಿ ವಿವಿಧ ಉನ್ನತ ಕಾರ್ಯಗಳು ಮಾಡಬೇಕಾಗಿದೆ ಗಾಂಧಿಜೀಯವರು ಕಂಡ ಸುಂದರ ರಾಮರಾಜ್ಯದ ಕನಸಿನಲ್ಲಿ ಬಹುಪಾಲು ಕಾಂಗ್ರೇಸ್ ಆಡಳಿತ ಅವಧಿಯಲ್ಲಿ ತಂದುಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಸವ ಪೂಜಾರಿ ಸಾಸ್ತಾನ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್, ಪಟ್ಟಣ ಪಂಚಾಯತಿ ಸದಸ್ಯ ರವೀಂದ್ರ ಕಾಮತ್ ಗುಂಡ್ಮಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ನಟರಾಜ್ ಹೊಳ್ಳ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಹಿಲಿಯಾಣ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ರಕ್ಷಿತ್ ಪೂಜಾರಿ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ನಜೀರ್ ಬಾರ್ಕೂರ್, ಜಾನ್ಸನ್ ಸಾಸ್ತಾನ, ರಾಘವೇಂದ್ರ ಸಾಸ್ತಾನ, ದೇವೇಂದ್ರ ಗಾಣಿಗ ಕೋಟ, ಮಹೇಶ್ ಹಿಲಿಯಾಣ, ರಘು ಭಂಡಾರಿ ಕುಂಜಿಗುಡಿಉಪಸ್ಥಿತರಿದ್ದರು.
ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ ವಂದಿಸಿದರು.











