ಐರೋಡಿ – ಕರ್ಣಾಟಕ ಬ್ಯಾಂಕ್ ವತಿಯಿಂದ ತರಗತಿ ಕೊಠಡಿ ಕೊಡುಗೆ

0
419

Click Here

Click Here

ಕನ್ನಡ ಮಾಧ್ಯಮದಲ್ಲಿ ಕಲಿತು ಚಂದ್ರಲೋಕದ ಮೇಲೆ ಬೆಳಕು ಚಲ್ಲಿದ್ದಾರೆ ಕನ್ನಡ ಮಾಧ್ಯಮದ ಮೇಲೆ ಕೀಳರಿಮೆ ಬಿಟ್ಟುಬಿಡಿ – ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ

ಕುಂದಾಪುರ ಮಿರರ್ ಸುದ್ದಿ…
ಕೋಟ: ಶಾಲೆ ಮತ್ತು ದೇವಸ್ಥಾನಗಳು ಊರಿನ ಹಿರಿಮೆ ಅದೇ ರೀತಿ ಅಲ್ಲಿನ ಅರ್ಚಕರು ಮತ್ತು ಶಿಕ್ಷಕರು ತಮ್ಮ ಕಾರ್ಯವೈಖರಿಯ ತಳಹದಿಯ ಮೇಲೆ ಆ ಎರಡು ಸಂಸ್ಥೆ ಅವಲಂಬಿತವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಹೇಳಿದರು.

ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಐರೋಡಿ ಸಾಸ್ತಾನ ಇಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ನಿರ್ಮಿಸಿಕೊಟ್ಟ ಶಾಲಾ ತರಗತಿ ಕೊಠಡಿಯನ್ನು ಉದ್ಘಾಟಿಸಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಕೀರಿಮೆ ಸಲ್ಲ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರು ವೈಜ್ಞಾನಿಕ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಶೈಕ್ಷಣಿಕ ಹಿನ್ನಲ್ಲೆಗೆ ಭಾಷೆಯೇ ಅಂತಿಮವಲ್ಲ ಬದಲಾಗಿ ಎಲ್ಲಾ ಭಾಷೆಗಳನ್ನು ಸಮನಾಗಿ ಸ್ವೀಕರಿಸಿ ಅದರ ಆಯಾಮದ ಮೇಲೆ ಮುಂದುವರೆಯಬೇಕು, ಮಾತೃಭಾಷೆಯ ಮೇಲೆ ಅಭಿಮಾನ ಇಟ್ಟು ವ್ಯವಹರಿಸಬೇಕು ಈ ಹಿನ್ನಲ್ಲೆಗಾಗಿ ಕರ್ಣಾಟಕ ಬ್ಯಾಂಕ್ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸಲಿದೆ, ಸಾಮಾಜಿಕ ಕ್ಷೇತ್ರದಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆ ನೀಡುತ್ತಿದೆ ಇನ್ನಷ್ಟು ಸೇವೆ ನೀಡಲಿದೆ ಎಂದರು.

Click Here

ಇದೇ ವೇಳೆ ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಎ.ಜಿ.ಎಂ ರಾಜ್‍ಗೋಪಾಲ್ ಬಿ ಹಾಗೂ ಕಟ್ಟಡ ಗುತ್ತಿಗೆದಾರ ಮಂಜುನಾಥ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸಕು ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಪಿ,ಬ್ರಹ್ಮಾವರ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಂದ ಗಾಣಿಗ, ನಿವೃತ್ತ ಶಿಕ್ಷಕ ರಾಮದೇವ ಹಂದೆ, ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಪಂಚಾಯತ್ ಸದಸ್ಯರಾದ ನಟರಾಜ್ ಗಾಣಿಗ, ಶೇಖರ್ ಪೂಜಾರಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ರೇಖಾ ಉಡುಪ, ಸಿಆರ್ ಪಿ ಅನುಪಮ, ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಚಕ್ರಪಾಣಿ ವಿ.ವಿ, ಐರೋಡಿ ಶಾಖೆಯ ಪ್ರಭಂಧಕ ಮಂಜುನಾಥ್ ಸೇಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪ್ರಸಿಲ್ಲಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಶಿಕ್ಷಕಿ ವೀಣಾ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here