ಕುಂಭಾಶಿ – ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಸಾಧ್ಯ – ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ

0
1154

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೃಷಿಯಲ್ಲಿ ನಾನಾ ರೀತಿಯ ಕೃಷಿಗಳಿರಬಹುದು ಆದರೆ ಮಲ್ಲಿಗೆ ಕೃಷಿಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುವುದನ್ನು ಪ್ರೇಮ ಕುಂಭಾಶಿ ತೊರಿಸಿಕೊಟ್ಟಿದ್ದಾರೆಂದು ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಗುರುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮನಡಿಗೆ 29ನೇ ಮಾಲಿಕೆ ಕಾರ್ಯಕ್ರಮ ಕುಂಭಾಶಿ ಪ್ರೇಮ ಇವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಮಲ್ಲಿಗೆ ಕೃಷಿ ಅದೊಂದು ಲಾಭದಾಯಕ ಕೃಷಿಯಾಗಿದೆ. ಆದರೆ ಅದರ ಬಗ್ಗೆ ಸಾಮಾನ್ಯ ಕೃಷಿಕರು ನಿರಾಸಕ್ತಿ ತೊರಸುವ ಕಾಲಘಟ್ಟದಲ್ಲಿ ಪ್ರೇಮ ಕುಂಭಾಶಿ ಮನೆ ಟೆರಸಿ, ವಠಾರದಲ್ಲಿ ಮಲ್ಲಿಗೆ ಕೃಷಿಮಯಗೊಳಿಸಿದ್ದಾರೆ. ಮಲ್ಲಿಗೆ ಹೂವು ಅರಳುವುದಲ್ಲದೆ ಎಲ್ಲರ ಮನದಲ್ಲೂ ಅರಳಿದ್ದಾರೆ.ಇದೊಂದು ಕ್ರಾಂತಿಕಾರಿ ಕೃಷಿಯಾಗಿ ಇತರರಿಗೆ ಮಾದರಿಯಾಗಿದೆ. ಪಂಚವರ್ಣ ಸಂಸ್ಥೆ ಇವರನ್ನು ಗೌರವಿಸವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಎಂದರು.

ಮಲ್ಲಿಗೆ ಮನೆಯಲ್ಲಿ ಸ್ವಚ್ಛತಾ ಹೀ ಸೇವಾ ಪಾಠ
ಮಲ್ಲಿಗೆ ಕೃಷಿ ಕಾಯಕ ಜೀವಿ ಪ್ರೇಮ ಕುಂಭಾಶಿ ಮನೆಯಲ್ಲಿ ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಸರಕಾರದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಹಿನ್ನಲ್ಲೆಯಲ್ಲಿ ಪರಿಸರದ ಜನರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ,ಅದರಿಂದಾಗುವ ಸಮಸ್ಯೆಗಳು,ಹಸಿರು ಕ್ರಾಂತಿ ಪಸರಿಸುವ ಕುರಿತು ನೆರೆದಿದ್ದವರಿಗೆ ಪಾಠ ಮಾಡಿದರು. ಅಲ್ಲದೆ ಪ್ರೇಮ ಕುಂಭಾಶಿ ಹಸಿ ಕಸವನ್ನು ಸಾವಯವ ಗೊಬ್ಬರ ಮಾಡುವ ವಿಧಾನವನ್ನು ಪ್ರಶಂಸಿದರು.

Click Here

ಈ ಸಂದರ್ಭದಲ್ಲಿ ಪ್ರೇಮ ಕುಂಭಾಶಿ ದಂಪತಿಗಳಿಗೆ ರೈತರೆಡೆಗೆ ನಮ್ಮ ನಡಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟೆಗಾರ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಇದ್ದರು.

ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸ್ವಾಗತಿಸಿದರೆ,ಸದಸ್ಯೆ ಶಕೀಲ ಸನ್ಮಾನಪತ್ರ ವಾಚಿಸಿದರು.ಸದಸ್ಯೆ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here