ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, : ಇಲ್ಲಿನ ಹೋಲಿ ರೋಜರಿ ಚರ್ಚ್ ೧೫೭೦ರಲ್ಲಿ ಸ್ಥಾಪನೆಯಾಗಿದ್ದು ಕಳೆದ ವರ್ಷದ ಕೋವಿಡ್ ಕಾರಣದಿಂದ ಪೂರ್ಣ ಸಿದ್ಧತೆಯಾದರೂ ಆಚರಣೆಗೆ ಬಾಕಿಯಾದ ೪೫೦ನೆ ವರ್ಷಾಚರಣೆಯನ್ನು ಅ.೭ರಂದು ಅಪರಾಹ್ನ ಸರಳವಾಗಿ ನಡೆಸಲಾಗುವುದು ಎಂದು ಪ್ರಧಾನ ಧರ್ಮಗುರು ಸ್ಟಾನಿ ತಾವ್ರೋ ಹೇಳಿದರು.

ಅವರು ಮಂಗಳವಾರ ಚರ್ಚ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ, ೧೫೪೨ ರಲ್ಲೆ ಪೊರ್ಚುಗೀಸರು ಕುಂದಾಪುರಕ್ಕೆ ಬಂದಿದ್ದು ನಂತರದ ದಿನಗಳಲ್ಲಿ ಚರ್ಚ್ ಸ್ಥಾಪಿಸಿದರು. ಇಲ್ಲಿನ ದಾಖಲೆಗಳು ಗೋವಾದಲ್ಲಿ ದೊರೆತು ಕುಂದಾಪುರದ ಚರ್ಚ್ ಅತ್ಯಂತ ಪ್ರಾಚೀನ ಚರ್ಚ್‌ಎಂದು ದೃಢಪಟ್ಟಿದೆ. ಇದೀಗ ಸಂತ ಪದವಿ ಪಡೆದ ಸಂತ ಜೋಸೆಫ್ ವಾಜ್ ೧೬೮೧ರಲ್ಲಿ ಪ್ರಥಮವಾಗಿ ಭಾರತೀಯ, ಅದೂ ಕೊಂಕಣಿಗ ಕುಂದಾಪುರ ಚರ್ಚಿನ ಪ್ರಧಾನ ಮತ್ತು ಕುಂದಾಪುರ ವಲಯದ ಪ್ರಧಾನರಾಗಿ ಆಯ್ಕೆಯಾಗಿದ್ದರು. ಕುಂದಾಪುರದಲ್ಲಿ ಸೇವೆ ನೀಡುತ್ತಿದ್ದಾಗ ಧ್ಯಾನ ಮಾಡುವಾಗ ಗಾಳಿಯಲ್ಲಿ ತೇಲುತ್ತಿದ್ದನ್ನು ಇನ್ನೋರ್ವ ಗುರುಗಳು ಕಣ್ಣಾರೆ ಕಂಡಿದ್ದರು. ಇದು ಕುಂದಾಪುರ ಚರ್ಚಿನಲ್ಲಿ ನಡೆದ ವಿಸ್ಮಯಗಳಲ್ಲಿ ಒಂದಾಗಿದೆ. ಅದಲ್ಲದೇ ಅನೇಕ ವಿಸ್ಮಯಗಳು ಇಲ್ಲಿ ನಡೆದಿವೆ. ಈಚೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಚರ್ಚ್‌ನಲ್ಲಿ ಮಾಡಲಾಗಿದ್ದು ರೋಸರಿ ಮಾತೆ, ಸಂತ ಜೋಸೆಪ್ ರವರ ವಿಗ್ರಹ ಸ್ಥಾಪನೆ ಮಾಡಲಾಗಿದೆ ಎಂದರು.

ಪಾಲನಾ ಸಮಿತಿ ಉಪಾಧ್ಯಕ್ಷ ಎಲ್. ಜೆ. ಫೆರ್ನಾಂಡಿಸ್, ಕುಂದಾಪುರ ಚರ್ಚ್, ಹಲವು ಚರ್ಚಗಳ ತಾಯಿ. ಜಾತಿ ಮತ ಭೇದ ಮರೆತು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಇಗರ್ಜಿಯೆ ಇಲ್ಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ಭಗಿನಿಯರಿಗೆ ಸ್ಥಳಾವಕಾಶ ಕೊಟ್ಟು, ಕಾರ್ಮೆಲ್ ಭಗಿನಿಯರು ಶಿಕ್ಷಣ ಸಂಸ್ಥೆಗಳು ನಡೆಸುತ್ತಾರೆ. ಜಾತಿ ಮತ ಭೇದ ಮರೆತು ಶಾಂತಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಮೀನು ಹಿಡಿಯಲು ಹೋಗುವರು, ತಮ್ಮ ದೈನಂದಿನ ಕೆಲಸಕ್ಕೆ ಹೋಗುವರು ನಮಸ್ಕರಿಸಿ, ಪುಷ್ಪಗಳನಿಟ್ಟು, ಕೈ ಮುಗಿದು ಪ್ರಾರ್ಥಿಸುತ್ತಾರೆ. ಹೀಗಾಗಿ ಈ ಚರ್ಚನ್ನು ಅಮ್ಮನ ಚರ್ಚ್ ಎಂದು ಕರೆಯುತ್ತಾರೆ ಎಂದರು.
ಕೋವಿಡ್ ದೆಸೆಯಿಂದ ಅದ್ದೂರಿ ಸಮಾರಂಭ ಮಾಡದೇ ಅ.೭ರಂದು ಸರಳ ಕಾರ್ಯಕ್ರಮ ನಡೆಯಲಿದೆ. ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ, ಶಿವಮೊಗ್ಗ ಬಿಷಪ್ ಡಾ| -ನಸಿಸ್ ಸೆರಾವೋ ಎಸ್.ಜೆ., ಉಡುಪಿ ಡಯಾಸಿಸ್‌ನ ವಿಕಾರ್ ಜನರಲ್ -| ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಧಾರ್ಮಿಕ ವಿಽಗಳನ್ನು ನಡೆಸಲಿದ್ದಾರೆ. ಇವರ ಜತೆಗೆ ಕರ್ನಾಟಕ ಪ್ರೊವಿನ್ಸಿಯಲ್ ಸುಪಿರಿಯರ್ ಸಿ| ಮರಿಯಾ ಶಮಿತಾ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಧರ್ಮಗುರು -| ವಿಜಯ್ ಜೆ. ಡಿ’ಸೋಜಾ, ಪಾಲನಾ ಸಮಿತಿ ಕಾರ್ಯದರ್ಶಿ ಆಶಾ ಕರ್ವಾಲ್ಲೋ, ೨೦ ಆಯೋಗಗಳ ಸಂಯೋಜಕಿ ಪ್ರೇಮಾ ಡಿ’ಕುನ್ಹಾ, ೪೫೦ನೆಯ ವರ್ಷಾಚರಣೆ ಸಮಿತಿ ಕಾರ್ಯದರ್ಶಿ -ಲ್ಸಿಯಾನಾ ಡಿ’ಸೋಜಾ, ಸದಸ್ಯ ಜಾನ್ಸನ್ ಅಲ್ಮೇಡಾ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಬರ್ನಾಡ್ ಡಿ’ಕೋಸ್ಟಾ ಉಪಸ್ಥಿತರಿದ್ದರು.











