ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೀನುಗಾರಿಕಾ ಸಚಿವರಾದ ಮಂಕಾಳ್. ಎಸ್.ವೈದ್ಯ ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಯನ್ನು ಪರಿಶೀಲಿಸಿ ಸಂಘದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಮೀನುಗಾರರ ಬೇಡಿಕೆ ಮತ್ತು ಕುಂದುಕೊರತೆ, ಮೀನುಗಾರಿಕೆ ಇಲಾಖೆಯಿಂದ ಬರತಕ್ಕ ಬಾಕಿಯಿರುವ ಅನುದಾನದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಯಿತು. ಈ ಬಗ್ಗೆ ಸಚಿವರು ಸ್ಪಂದನೆ ನೀಡಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಸಭೆಯಲ್ಲಿ ಮೀನುಗಾರಿಕಾ ನಿರ್ದೇಶಕರಾದ ದಿನೇಶ್ ಕುಮಾರ್ ಕಳ್ಳೇರ್, ಮೀನುಗಾರಿಕಾ ಜಂಟಿ ನಿರ್ದೇಶಕರಾದ ವಿವೇಕ್.ಆರ್, ಕೆ.ಎಫ್.ಡಿ.ಸಿ ಆಡಳಿತ ನಿರ್ದೇಶಕರಾದ ಗಣೇಶ್.ಕೆ ಮತ್ತು ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ಸುಮಲತಾ, ಕೆ.ಎಫ್.ಡಿ.ಸಿ ಮಾಜಿ ಅಧ್ಯಕ್ಷರಾದ ಬಿ.ಹೆರಿಯಣ್ಣ ಚಾತ್ರಬೆಟ್ಟು ಬೀಜಾಡಿ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಪ್ರಕಾಶ್.ಜಿ.ಪೂಜಾರಿ ಮತ್ತು ಮೀನುಗಾರರ ಸಮಾಜದ ಮುಖಂಡರು, ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು ಸಚಿವರನ್ನು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಕಾಂಚನ್ ಧನ್ಯವಾದ ಗೈದರು.











