ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಇದರ ಆಶ್ರಯದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚಿಗೆ ಸೂಲ್ಕುದ್ರು ಪರಿಸರದಲ್ಲಿ ನಡೆಯಿತು.
2ನೇ ಅವಧಿಗೆ ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಶೀಲಾ ಸದಾನಂದ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ ಬಿ ರಾಘವೇಂದ್ರ ಇವರುಗಳನ್ನು ಸೂಲ್ಕುದ್ರು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸ್ಥಳೀಯ ಸ್ವಸಹಾಯ ಸಂಘದ ಅಧ್ಯಕ್ಷೆ ಮೇಬಲ್ ಡಿಸೋಜಾ ಮತ್ತು ತೆರೆಸಾ ಒಲಿವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಜೇಮ್ಸ್‍ಒಲಿವೇರ ವಹಿಸಿ ಸ್ವಾಗತಿಸಿದರು.
ಸಮಿತಿಯ ಗೌರವಾಧ್ಯಕ್ಷ ಸಿಲ್ಪೆಸ್ಟರ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಎಲಿಯಾಸ್ ಒಲಿವೇರ ಧನ್ಯವಾದಗೈದರು.











