ಕುಂದಾಪುರ ಮಿರರ್ ಸುದ್ದಿ…
ಕೋಟ: ಕಾರಂತರು ಜ್ಞಾನ, ವಿಜ್ಞಾನ, ಸಂಗೀತ, ನೃತ್ಯ, ಕಲೆ, ಯಕ್ಷಗಾನ, ಪರಿಸರ ಪ್ರೇಮ ಮತ್ತು ಸಮಾಜ ಸೇವೆಗಳನ್ನು ಬದುಕಿನ ಉಸಿರಾಗಿ ರೂಪಿಸಿಕೊಳ್ಳುವುದರೊಂದಿಗೆ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವದೊಂದಿಗೆ ಸಾಹಿತಿಗಳ ಲೋಕದಲ್ಲಿ ವಿಶಿಷ್ಟವಾಗಿ ನಿಂತಿರುವ ಜ್ಞಾನದ ಕಡಲು ಎಂದು ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಸಂಶೋಧನ ಕೇಂದ್ರದ ವಿಶ್ವಸ್ಥ ಮಂಡಳಿಯ ಮುಖ್ಯಸ್ಥ ಗುಜ್ಜಾಡಿ ಪ್ರಭಾಕರ ನಾಯಕ್ ಹೇಳಿದರು.
ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಸಂಶೋಧನ ಹಾಗೂ ಅಧ್ಯಯನ ಕೇಂದ್ರದ ರಂಗ ರಥದಲ್ಲಿ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಬದುಕು ಮತ್ತು ಬರೆಹ ಸಮಾಜಕ್ಕೆ ದಾರಿದೀಪವಾಗಬೇಕು, ಕೇಂದ್ರ ಕಾರಂತರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಪ್ರಯತ್ನಿಸಲಿದೆ ಎಂದರು.
ಕಾರಂತರ ನಿಕಟವರ್ತಿಯಾಗಿದ್ದ ಗೆಳೆಯರ ಬಳಗದ ಸಂಸ್ಥೆಯ ಅಧ್ಯಕ್ಷ ತಾರಾನಾಥ ಹೊಳ್ಳ ಮಾತನಾಡಿ ತಾನು ಕಂಡಂತೆ ಕಾರಂತರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ಮಾಲಿನಿ ಮಲ್ಯ ಕಾರಂತರ ಕುರಿತು ಹೊಂದಿರುವ ಹೊಂದಿರುವ ಪ್ರೀತಿ ಮತ್ತು ಗೌರವ ಅನನ್ಯ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಗುರುರಾಜ್ ವಹಿಸಿದ್ದರು
ಈ ಪ್ರಯುಕ್ತ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಸಾರಥ್ಯದಲ್ಲಿ ಹೂವಿನ ಕೋಲಿನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಪಿ.ಶ್ರೀಪತಿ ಹೇರ್ಳೆ , ಟ್ರಸ್ಟಿನ ಸದಸ್ಯರಾದ ಪಂಜು ಪೂಜಾರಿ ಮತ್ತು ಮಾಧವ ಪೈ,ವಸಂತಿ.ಬಿ.ಭಟ್ ,ವಿಘ್ನೇಶ್ ಭಟ್ ಉಪಸ್ಥಿತರಿದ್ದರು. ವಿವೇಕ ಕಾಮತ್ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.











