ಕುಂದಾಪುರ ಮಿರರ್ ಸುದ್ದಿ…

ಕೋಟ: ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಹಿನ್ನಲ್ಲೆಯಲ್ಲಿ ಅ.10 ರಂದು ಕಾರಂತ ರಂಗ ರಥ ಮಾನಸ ಮಾನಸ ಸಾಲಿಗ್ರಾಮದಲ್ಲಿ ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಟ್ರಸ್ಟ್ ವತಿಯಿಂದ
ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ರಾಜಶೇಖರ ಹೆಬ್ಬಾರ್ ತಂಡದವರಿಂದ ಹೂವಿನ ಕೋಲು ಕಲೆಯನ್ನು ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ಕುಂಭಾಶಿ ವಿಶ್ವವಿನಾಯಕ ಸಿಬಿಎಸ್‍ಸಿ ಶಾಲೆ, ಟ್ರಸ್ಟ್, ಬಾಂಡ್ಯ ಎಜುಕೇಶನ್
ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ , ಇಲ್ಲಿನ ವಿದ್ಯಾರ್ಥಿಗಳು ಕಾರಂತ ಸ್ಮೃತಿ ಚಿತ್ರ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.
ಟ್ರಸ್ಟ್‌ನ ವಿಶ್ವಸ್ಥರಾದ ಗುಜ್ಜಾಡಿ ಪ್ರಭಾಕರ್ ನಾಯಕ್, ಗುರುರಾಜ್,ವಿಶ್ವನಾಥ ಕಾಮತ್, ಕೋಡಿ ಚಂದ್ರಶೇಖರ್ ನಾವಡ ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪ್ರಾಧ್ಯಾಪಕರಾದ ವಿಶಾಲ, ರವಿಶಂಕರ ಪ್ರಾಧ್ಯಾಪಕರಾದ ಪ್ರದೀಪ, ಆನಂದ, ಸುರೇಶ ಉಪಸ್ಥಿತರಿದ್ದರು.











