ಕುಂದಾಪುರ ಮಿರರ್ ಸುದ್ದಿ…

ಬೈಂದೂರು :ಅಖಿಲಭಾರತ ಕೃಷಿಕೂಲಿಕಾರರ ಸಂಘ(AIAWU)ದ ಕೇಂದ್ರ ಕಾರ್ಯಕಾರಿ ಸಮಿತಿಯು, ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಕನಿಷ್ಟಕೂಲಿ ದಿನಕ್ಕೆ ರೂ.600 ಮತ್ತು 200 ದಿನಗಳ ಕೆಲಸ ಕೊಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೇಶವ್ಯಾಪಿ ಜರುಗುವ ಹೋರಾಟದ ಭಾಗವಾಗಿ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಖಂಬದಕೋಣೆ ಗ್ರಾಮ ಪಂಚಾಯತ್ ಕಚೇರಿ ಎದುರು ಕೃಷಿ ಕೂಲಿಕಾರರ ಪ್ರತಿಭಟನೆ ಯಶಸ್ವಿಯಾಗಿ ಜರುಗಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ ರವರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಸಲ್ಲಿಸಲಾಯಿತು.
ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ,ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸ್ಥಳೀಯ ಮುಖಂಡರಾದ ಅನುಷ, ದಾರದೇವಾಡಿಗ, ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.











