ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಮೊದಲ ದಿನದ ಪೂಜಾ ವಿಧಿ ವಿಧಾನಗಳು ವೈಭವದಿಂದ ಜರಗಿತು.
ಮೊದಲ ದಿನದ ಪೂಜಾ ಸೇವಾಕರ್ತರಾಗಿ ಮಾಜಿ ಸಚಿವ ಕೋಟ ಶ್ತೀನಿವಾಸ ಪೂಜಾರಿ ಕುಟುಂಬಿಕರ ಪರವಾಗಿ ಪತ್ನಿ ಶಾಂತಾ ಶ್ರೀನಿವಾಸ್ ಪೂಜಾರಿ ಅಲ್ಲದೆ ಮಣೂರು ಪಡುಕರೆ ಗೋವೆನ್ ಮರೀನ್ ಫ್ರೆಶ್ ಎಕ್ಸ್‍ಪೋರ್ಟ್ ಇದರ ಪಾಲುದಾರ ಬಿಜು ನಾಯರ್ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ, ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾದರು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು.
ಶ್ರೀ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಸತೀಶ್ ಹೆಗ್ಡೆ,ಚಂದ್ರ ಪೂಜಾರಿ, ಸುಬ್ರಾಯ ಆಚಾರ್ಯ ,ಕೋಟ ಗ್ರಾ.ಪಂ ಸದಸ್ಯ ಭುಜಂಗ ಗುರಿಕಾರ, ದೇವಳದ ಮ್ಯಾನೇಜರ್ ಗಣೇಶ್ ಹೊಳ್ಳ ಇದ್ದರು. ಶರನ್ನವರಾತ್ರಿ ಅಂಗವಾಗಿ ಶ್ರೀ ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀದೇವಿ ಸಂತಾನಭಾಗ್ಯದಾತೆಯ ರೀತಿಯಲ್ಲಿ ಶೃಂಗರಿಸಲಾಗಿತ್ತು. ದೇಗುಲದ ಅರ್ಚಕ ದಾಮೋದರ ಜೋಗಿ, ಗಿರೀಶ್ ಜೋಗಿ, ದೀಕ್ಷಿತ್ ಜೋಗಿ ಮತ್ತಿತರರು ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು.ಅನ್ನಸಂತರ್ಪಣೆ ಕಾರ್ಯಕ್ರಮ,ಪ್ರಸಾದ ವಿತರಣೆ ಜರಗಿತು.











