ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ವಲಯ ಲಾರಿ ಚಾಲಕ-ಮಾಲಕರ ಸಂಘದ ಉದ್ಘಾಟನೆ ಅ. 29ರಂದು ವಡ್ಡರ್ಸೆ ಮಹಾಲಿಂಗೇಶ್ವರ ದೇಗುಲದ ಸಭಾಂಗಣದಲ್ಲಿ ಜರಗಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಂಘವನ್ನು ಉದ್ಘಾಟಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ ಲಾರಿ ಚಾಲಕ, ಮಾಲಕರು ತಮ್ಮ ಅಸ್ತಿತ್ವಕ್ಕಾಗಿ ಈ ಹಿಂದೆ ನಡೆಸಿದ ಹೋರಾಟ ಅವಿಸ್ಮರಣೀಯವಾದದ್ದು. ರಾಜ್ಯ ಸರಕಾರದ ತನಕ ನಿಮ್ಮ ಧ್ವನಿ ತಲುಪಿದೆ. ಇದೇ ರೀತಿ ಸಂಘಟನೆ ಮುಂದುವರಿಯಲಿ ಎಂದರು.
ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಆನಂದ ಸಿ.ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ, ಶರತ್ ಶೆಟ್ಟಿ, ಕಷರ್, ಲಾರಿ ಮಾಲಕರ ಸಂಘದ ಜಿಲ್ಲಾ ಸಂಚಾಲಕ ರಾಘವ ಶೆಟ್ಟಿ, ಸಂಘದ ಕಾನೂನು ಸಲಹೆಗಾರ, ಶ್ಯಾಮಸುಂದರ್ ನಾಯರಿ, ಗೌರವಾಧ್ಯಕ್ಷ ಭೋಜ ಪೂಜಾರಿ, ಕಾರ್ಯದರ್ಶಿ ಜನಾರ್ದನ ಪೂಜಾರಿ ಇದ್ದರು. ಸುಧೀರ್ ಮಲ್ಯಾಡಿ ಸ್ವಾಗತಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಕಿರಣ್ ಹೊಳೆಕೆರೆ ವಂದಿಸಿದರು.











