ಕುಂದಾಪುರ :ದೇಶಕ್ಕೆ ಇಂದಿರಾ, ಪಟೇಲ್ ಕೊಡುಗೆ ಅಪಾರ – ಮಲ್ಯಾಡಿ ಶಿವರಾಮ ಶೆಟ್ಟಿ

0
646

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇಂದು ಪ್ರಪಂಚದಲ್ಲಿ ಭಾರತ ಮಂಚೂಣಿ ಸ್ಥಾನ ಪಡೆಯಲು ಮತ್ತು ಇಡೀ ಪ್ರಪಂಚದ ನೋಟ ಭಾರತದತ್ತ ಬೀರಲು ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ನೆಹರು ಸಂಪುಟದಲ್ಲಿದ್ದ ದೇಶದ ಪ್ರಥಮ ಸಮರ್ಥ ಗ್ರಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ದೃಢ ನಿಲವು ದೂರ ದೃಷ್ಟಿ ಮತ್ತು ಸಮರ್ಥ ಆಡಳಿತ ಕಾರಣ. ದೇಶಕ್ಕೆ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಅಪೂರ್ವ ಕೊಡುಗೆಯಾಗಿದೆ ಎಂದು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

Click Here

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಕಾನೂನು, 20 ಅಂಶಗಳ ಕಾರ್ಯಕ್ರಮ, ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನದಿಂದ ಇಂದಿರಾಗಾಂಧಿ ದೇಶದ ಬೆಳವಣಿಗೆ ದಿಕ್ಕನ್ನು ಅಭಿವೃದ್ಧಿಯತ್ತ ಕೊಂಡೊಯ್ದರು ಮತ್ತು ಸರ್ದಾರ್ ಪಟೇಲರು ದೇಶದ ಪ್ರಥಮ ಗೃಹ ಸಚಿವರಾಗಿ ತೆಗೆದುಕೊಂಡ ಹಲವು ನಿರ್ದಾಕ್ಷಿಣ ನಿರ್ಧಾರಗಳು ಇಂದಿನ ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯವಾಗಿದೆ ಎಂದರು.

ಇಂದಿರಾ ಪಟೇಲ್ ಕೊಡುಗೆಯ ಬಗ್ಗೆ ಹಿರಿಯರಾದ ಗಂಗಾಧರ ಶೆಟ್ಟಿ ಮತ್ತು ಅಬ್ದುಲ್ಲಾ ಕೂಡಿ ಅವರು ಮಾತನಾಡಿದರು.

ಸಭೆಯಲ್ಲಿ ಬ್ಲಾಕ್ ಮಹಿಳಾ ಅಧ್ಯಕ್ಷ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ , ಪ್ರಭಾವತಿ ಶೆಟ್ಟಿ, ಕೋಣಿ ಪಂಚಾಯತ್ ಅಧ್ಯಕ್ಷ ಅಶೋಕ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಸುಜನ್ ಶೆಟ್ಟಿ, ಅಶ್ವತ್ ಕುಮಾರ್, ಕೆ ಶಿವಕುಮಾರ್, ಐಟಿ ಸೆಲ್ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ ,ಪಂಚಾಯತ್ ಸದಸ್ಯ ಗಣಪತಿ ಶೇಟ್ ,ಕೋಣಿ ನಾರಾಯಣ ಆಚಾರಿ, ಅಶೋಕ್ ಸುವರ್ಣ, ಕೇಶವ ಭಟ್, ಅಭಿಜಿತ್ ಪೂಜಾರಿ, ಶಶಿ ರಾಜ್ ಪೂಜಾರಿ, ಜ್ಯೋತಿ ನಾಯ್ಕ್, ವೇಲಾ ಬ್ರಗಾಂಜ ,ಸದಾನಂದ ಕಾರ್ವಿ, ವಿವೇಕಾನಂದ ,ಜೋಸೆಫ್ ರೆಬೆಲ್ಲೊ ,ದಿನೇಶ್ ಬೆಟ್ಟ ,ಕೆ ಸುರೇಶ್, ಮೇಬಲ್ ಡಿಸೋಜಾ, ಸ್ವಸ್ತಿಕ್ ಶೆಟ್ಟಿ, ಡೊಲ್ಫಿ ಕ್ರಾಸ್ತಾ, ಫ್ರಾನ್ಸಿಸ್ ಮಚಾದೊ, ಪ್ರವೀಣ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

ಯುವ ಮುಖಂಡ ಕೊಡಿ ಸುನಿಲ್ ಪೂಜಾರಿ ಸ್ವಾಗತಿಸಿ ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಂದಿಸಿದರು.

Click Here

LEAVE A REPLY

Please enter your comment!
Please enter your name here