ವರುಣತೀರ್ಥ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ, ರಾಜ್ಯೋತ್ಸವ ಪುರಸ್ಕಾರ ಪ್ರದಾನ, ಸಾಧಕರಿಗೆ ಸನ್ಮಾನ

ಕುಂದಾಪುರ ಮಿರರ್ ಸುದ್ದಿ…
ಕೋಟ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಧ್ಯೇಯ ಕುವೆಂಪು ಸಾರಿದ “ಮನುಜ ಮತ ವಿಶ್ವ ಪಥ”ವಾಗಬೇಕಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಕನ್ಮಡ ರಾಜ್ಯೋತ್ಸವ ಪ್ರಯುಕ್ತ ಕೋಟ ವರುಣತೀರ್ಥ ವೇದಿಕೆ ಇವರ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದ “ನಿರಂತರ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದ್ದು ಎಂದ ಅವರು, ಉದ್ಯೋಗಕ್ಕಾಗಿ ಹೊರರಾಜ್ಯ, ವಿದೇಶಗಳಿಗೆ ಹೋದಾಗಲೂ ಮಾತೃಭಾಷೆ ಕನ್ನಡವನ್ನು ಮರೆಯದೇ ಇರುವ ಸಂಪ್ರದಾಯವನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದವರು ಹೇಳಿದರು.
ಮಣೂರು ಪೆಡುಕೆರೆ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗಂಗೊಳ್ಳಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಸುಜಯೀಂದ್ರ ಹಂದೆಯವರನ್ನು ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಚಲನ ಚಿತ್ರ ನಟ ರಾಘವೇಂದ್ರ ಡಿ.ಜಿ.ತೀರ್ಥಳ್ಳಿ, ಈಜು ಪಟು ಮಾಸ್ಟರ್ ದಿಗಂತ್ ಆರ್. ಪೂಜಾರಿ ಕೋಟತಟ್ಟು, ಕನ್ಮಡದ ಕಟ್ಟಾಭಿಮಾನಿ ಪಾರಂಪಳ್ಳಿ ರಾಮಣ್ಣ, ಕೋಟ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನ ಆನಂದ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಕುಂದರ್, ಕೋಟೇಶ್ವರ ವರದರಾಜ ಶೆಟ್ಟಿ ಪದವಿ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್, ವರುಣ ತೀರ್ಥ ವೇದಿಕೆಯ ಅಧ್ಯಕ್ಷ ಉದಯ ದೇವಾಡಿಗ, ಲತಾ ಹೋಟೆಲ್ ಮಾಲಕ ವೆಂಕಟೇಶ ಪ್ರಭು, ಜಿ.ಎಸ್.ಬಿ.ಹಿತರಕ್ಷಣಾ ವೇದಿಕೆಯ ಕೋಟ ಸತೀಶ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.
ವರುಣತೀರ್ಥ ವೇದಿಕೆಯ ಗೌರವಾಧ್ಯಕ್ಷ ಉದಯ ದೇವಾಡಿಗ ಪ್ರಾಸ್ತಾವಿಕ ಮಾತುಗಳ್ನಾಡಿದರು. ಚಂದ್ರ ಆಚಾರ್ ಕೋಟ ಸ್ವಾಗತಿಸಿದರು. ರವಿ ಬನ್ನಾಡಿ ಪ್ರಾರ್ಥಿಸಿದರು.ಮಂಜುನಾಥ್ ಕಾರ್ತಟ್ಟು ಕಾರ್ಯಕ್ರಮ ನಿರೂಪಿಸಿದರು.











