ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2023 ಕಾರ್ಯಕ್ರಮ ಉದ್ಘಾಟನೆ

0
473

ಕುಂದಾಪುರ ಮಿರರ್ ಸುದ್ದಿ…

ಬೈಂದೂರು : ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಜನತಾ ಆವಿಷ್ಕಾರ್ 2023 (ವಿಜ್ಞಾನ-ವ್ಯವಹಾರ-ಸಾಂಸ್ಕೃತಿಕ ಸಂಗಮ) ವಿನೂತನ ಕಾರ್ಯಕ್ರಮ ಗುರುವಾರ ಕಾಲೇಜಿನ ವಠಾರದಲ್ಲಿ ನಡೆಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರು ಜನತಾ ಆವಿಷ್ಕಾರ್ 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜನತಾ ಕಾಲೇಜಿನ ಕಾರ್ಯ ನಿಜಕ್ಕೂ ಮಹತ್ವಪೂರ್ಣವಾದದ್ದು ಎಂದರು.

ಹೆಮ್ಮಾಡಿ ವಿವಿವಿ ಮಂಡಳಿಯ ಕಾರ್ಯದರ್ಶಿ ಹಾಗೂ ಖಜಾಂಚಿ ಮಾಧಮ ಪೂಜಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರದ ಸೃಷ್ಟಿ ಇನ್ಫೋಟೆಕ್ ಕಿಯೋನಿಕ್ಸ್ ನಿರ್ದೇಶಕ ಹರ್ಷವರ್ಧನ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸಲು ಜನತಾ ಕಾಲೇಜು ಮಾಡುತ್ತಿರುವ ಕಾಯಕವನ್ನು ಶ್ಲಾಘಿಸಿ ವಿದ್ಯಾರ್ಥಿಗಳೇ ಜೀವನದಲ್ಲಿ ಕಷ್ಟ ಪಡುವುದನ್ನು ಕಲಿಯಿರಿ. ಬದುಕು ಕಟ್ಟಿಕೊಳ್ಳಲು ವ್ಯವಹಾರ ಮೇಳದಂತಹ ಕಾರ್ಯಕ್ರಮಗಳು ಪೂರಕವಾಗಿವೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸೊಸೈಟಿಯ ಶಾಖಾ ಪ್ರಬಂಧಕ ಉದಯ್ ಕುಮಾರ್ ಹಟ್ಟಿಯಂಗಡಿ, ಶೈಕ್ಷಣಿಕ ಮಾರ್ಗದರ್ಶಿ ಮತ್ತು ಶೈಕ್ಷಣಿಕ ಸಲಹೆಗಾರ ಚಿತ್ರಾ ಕಾರಂತ್, ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜು ಕಾಳವಾರ, ಪಿಯು ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Click Here

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲ ಗಣೇಶ್ ಮೊಗವೀರ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು, ವಾಣಿಜ್ಯ ಉಪನ್ಯಾಸಕಿ ಜ್ಯೋತಿ ಮೊಗವೀರ ವಂದಿಸಿದರು.

ಕಾರ್ಯಕ್ರಮದ ವೈಶಿಷ್ಟ್ಯಗಳು: ವ್ಯವಹಾರ ಮೇಳ : ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಹಾಗೂ ಮಾರ್ಕೆಟಿಂಗ್ ಕೌಶಲ್ಯ ಬೆಳೆಸುವ ಉದ್ದೇಶದಿಂದ, ವಿಶಾಲವಾದ ಜನತಾ ಕ್ರೀಡಾಂಗಣದಲ್ಲಿ ತೆರೆದ 30 ಮಳಿಗೆಗಳ ಮೂಲಕ ಜನತಾ ವಿದ್ಯಾರ್ಥಿಗಳ ವ್ಯವಹಾರ ಮೇಳ

ಜಾನಪದ ಹಬ್ಬ : ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಸಾಮೂಹಿಕ ಜಾನಪದ ನೃತ್ಯ

ವಿಜ್ಞಾನ ವಿಸ್ಮಯ : ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ

ಚಿತ್ರ-ಚಿತ್ತಾರ : ಜನತಾ ವಿದ್ಯಾರ್ಥಿಗಳು ಸ್ವರಚಿಸಿದ ಚಿತ್ರ ಕಲಾ ಪ್ರದರ್ಶನ

ಭಾವ ಸಂಗಮ : ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಭಾವ ಗೀತೆಗಳ ಸ್ವರ ಮಾಧುರ್ಯ ನಡೆಯಿತು.

LEAVE A REPLY

Please enter your comment!
Please enter your name here