ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನ. 11ರಂದು ಸೈಂಟ್ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯ ಈರ್ವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ರಂಗೋಲಿ ಸ್ಪರ್ಧೆಯಲ್ಲಿ 10ನೆಯ ತರಗತಿ ಸಾಹಿತ್ಯಾ ಪ್ರಥಮ, 10ನೆಯ ತರಗತಿ ವೀಕ್ಷಿತ್ ಮಿಮಿಕ್ರಿಯಲ್ಲಿ ಪ್ರಥಮ, ಕವನ ವಾಚನದಲ್ಲಿ 10ನೆಯ ತರಗತಿ ರಾಧಿಕಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿದೆ.











