ಕುಂದಾಪುರ :ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ

0
689

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಸಿಎ/ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ನವೆಂಬರ್ 2023ರ ಸಿಎಸ್‌ಇಇಟಿ (ಸಿಎಸ್ ಫೌಂಡೇಶನ್) ಪರೀಕ್ಷೆಯಲ್ಲಿ 17 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀನಿಧಿ ನಾಯ್ಕ್‌(153), ನಿಹಾರ್‌ ಎಸ್.(139), ವೈಷ್ಣವಿ ಶೆಟ್ಟಿಗಾರ್‌(137), ವೇದಾಂತ್‌ ಎಮ್. ಶೆಟ್ಟಿ(137), ಆಕಾಶ್‌ ಎಮ್. ಶೆಟ್ಟಿ(136), ಸುಮಂತ್‌(133), ನಿಖಿಲ್‌ ಆರ್‌. ಪೂಜಾರಿ(129), ಆಯುಷ್‌(128), ಶ್ರಾವ್ಯ ಎಸ್. ಶೆಟ್ಟಿ(120), ಸಹನಾ(118), ರಿಯಾ ಫೆರ್ನಾಂಡೀಸ್‌(117), ಭೂಮಿಕ(112), ಗಗನ್‌ಕುಮಾರ್‌ ಶೆಟ್ಟಿ(108), ಪ್ರೇಕ್ಷಿತಾ ಶೆಟ್ಟಿ(102), ಪೂರ್ವಿಕಾ(100), ರತೀಶ್‌(100) ಮತ್ತು ಶ್ರುತಿ(100) ಅಂಕಗಳೊಂದಿಗೆ ಸಿಎಸ್ ಕೋರ್ಸುಗಳ ಪ್ರಥಮ ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಸಿಎಸ್ ಎಕ್ಸಿಕ್ಯೂಟಿವ್ ಹಂತಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ಅನುಭವಿ ಕಂಪೆನಿ ಸೆಕ್ರೆಟರಿಯವರನ್ನು ಒಳಗೊಂಡಂತೆ ಗುಣಮಟ್ಟದ ತರಬೇತುದಾರರಿಂದ ತರಬೇತಿಯನ್ನು ನೀಡಿ ಅತ್ಯಧಿಕ ಪೂರಕ ಪರೀಕ್ಷೆಗಳನ್ನು ನಡೆಸಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿತ್ತು. ಅನುಭವಿ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ ಇಂತಹ ಫಲಿತಾಂಶ ಸಾಧ್ಯವಾಯಿತು. ಸಿಎ/ಸಿಎಸ್ ಫಲಿತಾಂಶದಲ್ಲಿ ಶಿಕ್ಷ ಪ್ರಭ ಅಕಾಡೆಮಿಯ ವಿದ್ಯಾರ್ಥಿಗಳ ನಿರಂತರ ಸಾಧನೆ ಮುಂದುವರಿಯಲು ಪೋಷಕರ ಸಹಕಾರದಿಂದ ಬೋಧಕ ಸಿಬ್ಬಂದಿಗಳ ಅವಿರತ ಶ್ರಮಕ್ಕೆ ವಿದ್ಯಾರ್ಥಿಗಳು ನೀಡಿದ ಸಹಕಾರ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ 1ರಿಂದ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗೆ ತರಬೇತಿಯನ್ನು ಪ್ರಾರಂಭಿಸಿ ಮುಂದಿನ ಹಂತದಲ್ಲೂ ವಿದ್ಯಾರ್ಥಿಗಳಿಗೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

“ನಾನು ಸಿಎಸ್‌ ಪರೀಕ್ಷೆಗಾಗಿ ತಯಾರಿಯನ್ನು ನನ್ನ ಮೊದಲ ಸಿಎಸ್‌ ತರಗತಿಯಿಂದಲೇ ಪ್ರಾರಂಭಿಸಿದೆ. ನನ್ನ ತಂದೆ-ತಾಯಿ ಎಂದೂ ವಿದ್ಯಾಭ್ಯಾಸದ ವಿಷಯದಲ್ಲಿ ಒತ್ತಡವನ್ನು ಹೇರಲಿಲ್ಲ. ನಾನು ಭರವಸೆ ಕಳೆದುಕೊಂಡಾಗಲೆಲ್ಲಾ ನನ್ನನ್ನು ಹುರಿದುಂಬಿಸಿ ನಾನು ಈ ಮಟ್ಟಕ್ಕೆ ಬರುವಂತೆ ಮಾಡಿದ್ದಾರೆ. ನಾನು ಖಂಡಿತವಾಗಿಯೂ ಶಿಕ್ಷ ಪ್ರಭ ಅಕಾಡೆಮಿಗೆ ಆಭಾರಿಯಾಗಿದ್ದೇನೆ. ನನ್ನ ಫಲಿತಾಂಶದ ನಂತರ ನಾನು ತುಂಬಾ ತೃಪ್ತಳಾಗಿದ್ದೇನೆ, ಇದಕ್ಕೆ ನನ್ನ ಶಿಕ್ಷಕರ ಪ್ರೋತ್ಸಾಹ ಮತ್ತು ತಂದೆ-ತಾಯಿಯರ ಆಶೀರ್ವಾದವೇ ಕಾರಣ. ಸ್ಪೇಸ್‌ ನಿರಂತರವಾಗಿ ನಮ್ಮ ಪರೀಕ್ಷಾ ತಯಾರಿಗೆ ಹುರಿದುಂಬಿಸಿ ಮಾರ್ಗದರ್ಶನ ನೀಡಿತ್ತು, ಅವರಿಲ್ಲದೇ ಇಂದು ಈ ಫಲಿತಾಂಶ ಸಾಧ್ಯವಾಗುತ್ತಿರಲಿಲ್ಲ.” – ಶ್ರೀನಿಧಿ ನಾಯ್ಕ್‌ (153ಅಂಕ) ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ

Click Here

LEAVE A REPLY

Please enter your comment!
Please enter your name here