ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಆರ್ಥಿಕತೆ ಬೆಳೆಯುವಲ್ಲಿ ಯುವ ಪೀಳಿಗೆಯ ಕೌಶಲ್ಯ ಅಗತ್ಯ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಕೌಶಲ್ಯ ಉಳಿದ ಎಲ್ಲಾ ಕಡೆಗಳಿಗಿಂತ ಭಿನ್ನ ಸತ ವಿಶೇಷ. ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ವೊಂದರಲ್ಲಿ ವಾಣಿಜ್ಯ ಮೇಳವೊಂದನ್ನು ಇಷ್ಟು ಸೃಜನಾತ್ಮಕವಾಗಿ ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಎಂ. ಜಿ. ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಧೇಶ್ ಪ್ಲಾಸ್ಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೋಟೇಶ್ವರ ಇದರ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಡಿ. ಕಾಮತ್, ವಾಣಿಜ್ಯೋದ್ಯಮದಲ್ಲಿ ಕಲ್ಪನೆ ಮತ್ತು ಕೌಶಲ್ಯ ಪ್ರಮುಖಾಂಶ. ಕಲ್ಪನೆ ಮತ್ತು ಕೌಶಲ್ಯಗಳನ್ನು ಕಾರ್ಯಗತಗೊಳಿಸುವುದು ಕೂಡ ಅಷ್ಟೇ ಮುಖ್ಯ.ವಾಣಿಜ್ಯೋದ್ಯಮದಲ್ಲಿ ಅಸ್ತಿತ್ವದಲ್ಲಿ ಉಳಿದುಕೊಳ್ಳುವುದಕ್ಕೆ ಹೊಸತನ, ಆವಿಷ್ಕಾರ ಹಾಗೂ ದೂರದೃಷ್ಟಿ ಅಗತ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಅಂಡ್ ಕಲ್ಬರಲ್ ಟ್ರಸ್ಟ್(ರಿ.) ಕುಂದಾಪುರದ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಅಂಡ್ ಕಲ್ಬರಲ್ ಟ್ರಸ್ಟ್(ರಿ.) ಕುಂದಾಪುರದ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಶ್ರೀ ವೆಂಕಟರಮಣ ಸಂಸ್ಥೆಯ ಖಜಾಂಚಿ ಶ್ರೀ ಲಕ್ಷ್ಮಿ ನಾರಾಯಣ ಶೆಣೈ,ಕೆನರಾ ಬ್ಯಾಂಕ್ ಕುಂದಾಪುರ ಇಲ್ಲಿನ ಶಾಖಾಧಿಕಾರಿ ಶ್ರೀಮತಿ ಭಾರತಿ, ಆಡಳಿತಾಧಿಕಾರಿ ಪ್ರಭಾಕರ್ ಶಾನುಭೋಗ್,ಶ್ರೀ ವೆಂಕಟರಮಣ ಹೈಸ್ಕೂಲ್‌ನ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಪ್ರೈಮರಿ ಸ್ಕೂಲ್‌ನ ಮುಖ್ಯ ಶಿಕ್ಷಕಿ ರೇಷ್ಮಾ ಡಿ’ಸೋಜಾ, ಪ್ರೀ ಪ್ರೈಮರಿ ಸ್ಕೂಲ್‌ನ ಮುಖ್ಯ ಶಿಕ್ಷಕಿ ಪ್ರಮಿಳಾ ಡಿ’ಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ರಾಗಿಣಿ ಸ್ವಾಗತಿಸಿದರು, ರಸಾಯನ ಶಾಸ್ತ್ರ ಉಪನ್ಯಾಸಕ ಸಂದೀಪ್, ಸಂಖ್ಯಾ ಶಾಸ್ತ್ರ ಉಪನ್ಯಾಸಕಿ ವಿದ್ಯಾಶ್ರೀ ಅತಿಥಿಗಳನ್ನು ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮ ಸಂಯೋಜಕಿ, ಉಪನ್ಯಾಸಕಿ ಲತಾ ಪೈ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ಕಾರ್ಯಕ್ರಮ ನಿರ್ವಹಿಸಿದರು.
55 ಅಂಗಡಿಗಳನ್ನೊಳಗೊಂಡ ಬೃಹತ್ ವಾಣಿಜ್ಯ ಮೇಳ :
ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರದ ಪ್ರಜ್ಞೆ ಮೂಡಿಸಬೇಕು ಎಂಬ ದೃಷ್ಟಿಯಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ 55 ಅಂಗಡಿಗಳನ್ನು ಹಾಕಲಾಗಿತ್ತು. ವಾಣಿಜ್ಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಸೈನ್ಸ್ ವಿಭಾಗದ ವಿದ್ಯಾರ್ಥಿಗಳೂ ಕೂಡ ಈ ವಾಣಿಜ್ಯ ಮೇಳದಲ್ಲಿ ಅಂಗಡಿಗಳನ್ನು ಹಾಕಿರುವುದು ವಿಶೇಷ. ಐಸ್ ಕ್ರೀಂ ಸ್ಟಾಲ್, ಗೋಲಿ ಸೋಡಾ ಅಂಗಡಿ, ಬೇಕಡ್ ಅಂಡ್ ಪ್ರೈಡ್ ಸ್ಟ್ಯಾಕ್ಸ್ ಸ್ಟಾಲ್, ಸ್ವೀಟ್ಸ್ ಸ್ಟಾಲ್, ಲೇಡಿಸ್ ಡ್ರೆಸಸ್ ಶಾಪ್, ಫಾಸ್ಟ್ ಫುಡ್ ಸ್ಟಾಲ್, ಮೆನ್ಸ್ ವೇರ್ ಶಾಪ್, ಚಾಟ್ಸ್ ಶಾಪ್, ಜ್ಯೂಸ್ ಸೆಂಟರ್ ಸೇರಿ ಇನ್ನಿತರ ಅಂಗಡಿಗಳ ಒಂದು ದೊಡ್ಡ ವಾಣಿಜ್ಯ ಮೇಳವೇ ಕಾಲೇಜ್ ಕ್ಯಾಂಪಸ್‌ನಲ್ಲಿ ಕಳೆಕಟ್ಟಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ವಾಣಿಜ್ಯ ಮೇಳದಲ್ಲಿ ಪಾಲ್ಗೊಂಡರು.











